ಕೋವಿಡ್ ಸಾವುಗಳು ಹೆಚ್ಚುತ್ತಿದೆ, ಲಸಿಕೆಗಳು ಕಡಿಮೆಯಾಗುತ್ತಿವೆ: ರಾಹುಲ್ ಗಾಂಧಿ

ಜನರ ಗಮನ ಬೇರೆಡೆ ಸೆಳೆಯುವುದು, ಸುಳ್ಳು ಹಬ್ಬಿಸುವುದೇ ಕೇಂದ್ರದ ಯೋಜನೆ ಎಂದ ರಾಹುಲ್

 | 
Rahul gandhi

ನವದೆಹಲಿ: ದೇಶದಲ್ಲಿ ಕೋವಿಡ್ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿವೆ, ಲಸಿಕೆಗಳ ಸಂಖ್ಯೆ ಕಡಿಮೆಯಾಗುತ್ತಿದೆ ಆದರೆ, ಕೇಂದ್ರ ಸರ್ಕಾರ ಮಾತ್ರ ದೇಶದ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ವ್ಯಾಕ್ಸಿನ್ ಗಳು ಕಡಿಮೆಯಾಗಿವೆ, ಕೋವಿಡ್ ಸಂಬಂಧಿತ ಸಾವುಗಳು ಹೆಚ್ಚುತ್ತಿವೆ. ಗಮನ ಬೇರೆಡೆಗೆ ಸೆಳೆಯುವುದು, ಸುಳ್ಳು ಸುದ್ದಿಯನ್ನು ಹಬ್ಬಿಸುವುದು, ಸತ್ಯವನ್ನು ಮುಚ್ಚಿಡಲು ಧ್ವನಿ ಹೆಚ್ಚಿಸುವುದೇ ಕೇಂದ್ರ ಸರ್ಕಾರದ ಯೋಜನೆಯಾಗಿದೆ ಎಂದಿರುವ ರಾಹುಲ್, ಲಸಿಕೆಗಳ ಕೊರತೆ ಮತ್ತು ದೈನಂದಿನ ಕೋವಿಡ್ ಸಾವಿನ ಸಂಖ್ಯೆಯ ಏರಿಳಿತದ ಗ್ರಾಪ್ ಅನ್ನು ರಾಹುಲ್ ಗಾಂಧಿ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಕಳೆದ ಒಂದು ದಿನ ಕೋವಿಡ್ ಸೋಂಕಿನಿಂದ ಭಾರತದಲ್ಲಿ ದಾಖಲೆಯ 4,529 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ 2,83,248 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮಂತ್ರಾಲಯ ವರದಿಯಲ್ಲಿ ತಿಳಿಸಿದೆ. ಕಳೆದ ಮೂರು ದಿನಗಳಿಂದ ಕೋವಿಡ್ ಪ್ರಕರಣಗಳಲ್ಲಿ ಮೂರು ಲಕ್ಷಕ್ಕಿಂತ ಕಡಿಮೆ ಸಂಖ್ಯೆಗೆ ಕ್ಷಿಣಿಸಿದ್ದು, 2.6 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ.