ವಿಜಯಪುರ ಜಿಲ್ಲಾಸ್ಪತ್ರೆ ಮೇಲಿಂದ ಹಾರಿ ಕೊವಿಡ್ ರೋಗಿ ಆತ್ಮಹತ್ಯೆ
ಕೊರೊನಾದಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ
May 5, 2021, 17:42 IST
| 
ವಿಜಯಪುರ: ಕೊವಿಡ್ ರೋಗಿಯೊಬ್ಬ ಜಿಲ್ಲಾಸ್ಪತ್ರೆ ಮೇಲಿಂದ ಹಾರಿ ಸಾವನ್ನಪ್ಪಿದ ಘಟನೆ ವಿಜಯಪುರ ದಲ್ಲಿ ನಡೆದಿದೆ. ಸುರೇಶ ಅಂಗಡಿ (56) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಕೊರೊನಾ ಹಿನ್ನೆಲೆ ಕಳೆದ ಏಪ್ರೀಲ್ 15 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ, ಅಲ್ಲದೆ ಆಕ್ಸಿಜನ್ ಬೆಡ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಕೌಟುಂಬಿಕ ಕಾರಣ ಇಲ್ಲಾ ಕೊರೊನಾದಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮಾನಸಿಕ ಖಿನ್ನತೆಯು ಕಾರಣ ಎನ್ನಲಾಗ್ತಿದ್ದು ಇತ್ತೀಚೆಗೆ ಕೊರೊನಾದಿಂದಲು ಗುಣಮುಖನಾಗಿದ್ದ ಆದ್ರೆ ನಿನ್ನೆ ರಾತ್ರಿ ಮೊಬೈಲ್ ನಲ್ಲಿ ಮಾತನಾಡುವಾಗ ಪತ್ನಿ ಕೈಗೆ ಮೊಬೈಲ್ ಕೊಟ್ಟು ಬಳಿಕ ಬಿಲ್ಡಿಂಗ್ ಮೇಲಿಂದ ಹಾರಿ ಆತ್ಮಹತ್ಯೆ ಗೆ ಶರಣಾಗಿದ್ದಾನೆ. ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.