11 ದಿನ ಮರದಲ್ಲೇ ಕಾಲ ಕಳೆದ ಕೊರೋನಾ ಸೋಂಕಿತ
ಪ್ರತ್ಯೇಕ ವಾಸಕ್ಕಾಗಿ ಮರವೇರಿದ ತೆಲಂಗಾಣದ ವಿದ್ಯಾರ್ಥಿ

ಹೈದರಾಬಾದ್: ಕೋವಿಡ್ ದೃಢಪಟ್ಟ ಸೋಂಕಿತ ಬುಡಕಟ್ಟು ವಿದ್ಯಾರ್ಥಿಯೋರ್ವ ಮನೆಯಲ್ಲಿ ಪ್ರತ್ಯೇಕ ವಾಸಕ್ಕೆ ಸ್ಥಳಾವಕಾಶದ ಅಭಾವವಿದ್ದ ಹಿನ್ನೆಲೆ ಮರವೇರಿ 11 ದಿನಗಳ ಕಾಲ ಮರದ ಮೇಲೆ ಅಟ್ಟಣಿಗೆ ನಿರ್ಮಿಸಿ ಅದರ ಮೇಲೆ ಪ್ರತ್ಯೇಕ ವಾಸ ಮಾಡಿರುವ ಘಟನೆ ತೆಲಂತಾಣದ ನಲಗೊಂಡ ಜಿಲ್ಲೆಯ ಕೊಥನಂದಿಕೊಂಡ ಬುಡಕಟ್ಟು ಗ್ರಾಮದಲ್ಲಿ ನಡೆದಿದೆ.
ಒಂದೇ ಕೋಣೆ ಇರುವ ನಮ್ಮ ಮನೆಯಲ್ಲಿ ಅಮ್ಮ, ಅಪ್ಪ, ಒಮ್ಮೆ, ತಂಗಿ ಐದು ಜನ ವಾಸವಿದ್ದೇವೆ. ನನಗೆ ಬೇರೆ ಯಾವ ಆಯ್ಕೆ ಇಲ್ಲದೆ ನಮ್ಮ ಕುಟುಂಬಸ್ಥರ ಸುರಕ್ಷತೆಯೆ ದೃಷ್ಟಿಯಿಂದ ನಾನು ಮರವೇರಿ ಪ್ರತ್ಯೇಕವಾಗಿರಲು ನಿರ್ಧರಿಸಿದೆ ಎಂದು ರಮಾವತ್ ಶಿವ ನಾಯ್ಕ್ ಹೇಳಿದ್ದಾರೆ.
11 ದಿನಗಳ ಕಾಲ ಮರದಲ್ಲೇ ಪ್ರತ್ಯೇಕವಾಸ ನಡೆಸಿದ ಬಳಿಕ ಅವರು ಊರಿನಿಂದ 7 ಕಿಲೋಮೀಟರ್ ದೂರವಿದ್ದ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಿದ ಬಳಿಕ ಕೋವಿಡ್ ನಿಂದ ಗುಣಮುಖನಾದ ನಂತರ ಆತನನ್ನು ಮನೆಗೆ ಕಳುಹಿಸಲಾಗಿದೆ.
ಕೋವಿಡ್ ದೃಢಪಟ್ಟ ಮೊದಲ ದಿನ ಮನೆ ಮುಂದಿನ ಬಯಲಿನಲ್ಲಿದ್ದೆ. ನಂತರ ನನ್ನ ವಾಸ್ತವ್ಯವನ್ನು ಮರದ ಮೇಲೆ ಹೂಡುವ ಯೋಚನೆ ಬಂತು. ತದನಂತರ ಮರದಲ್ಲಿ ಅಟ್ಟಣಿಗೆ ನಿರ್ಮಿಸಿ ನನ್ನ ಬಹುಪಾಲು ಸಮಯವನ್ನು ಪುಸ್ತಕ ಓದುವುದು ಸಂಗೀತ ಕೇಳುವುದರೊಂದಿಗೆ ಮರದಲ್ಲೇ ಕಳೆದೆ ಎಂದು ಹೇಳಿದ್ದಾನೆ.
ನಾನು ಮನೆ ಮುಂದೆಯೇ ಇದ್ದುದ್ದರಿಂದ ನನಗೆ ಭಯವಾಗಲಿಲ್ಲ, ಒಂಬತ್ತು ದಿನಗಳ ನಂತರ ನನಗೆ ಹೊಂದಾಣಿಕೆ ಆಯ್ತು, ಎಂದು ರಮಾವತ್ ಶಿವ ನಾಯ್ಕ್ ತಿಳಿಸಿದ್ದಾನೆ.
ನಮ್ಮ ಗ್ರಾಮದಲ್ಲಿ ಸುಮಾರು 50 ಜನ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಪ್ರತ್ಯೇಕ ವಾಸಕ್ಕೆ ಸರಿಯಾದ ವ್ಯವಸ್ಥೆಗಳಿಲ್ಲದೆ ಪರದಾಡುವಂತಾಗಿದೆ. ಆದ್ದರಿಂದ ಪ್ರತೀ ಗ್ರಾಮದಲ್ಲೂ ಪ್ರತ್ಯೇಕವಾಸಕ್ಕೊಂದು ಕೇಂದ್ರ ಇದ್ದರೆ ಉತ್ತಮ ಅದು ನಮ್ಮಂತೆ ಕಷ್ಟದಲ್ಲಿರುವವರಿಗೆ ಅನುಕೂಲವಾಗಲಿದೆ ಎಂದು ಶಿವ ನಾಯ್ಕ್ ಹೇಳಿದ್ದಾನೆ.
ನನಗೆ ಊಟ ಬೇಕಾದಾಗ ನನ್ನ ಅಮ್ಮ ಊಟ ತಂದು ಮರದ ಕೆಳಗೆ ಒಂದು ಚೇರ್ ನಲ್ಲಿ ಇಟ್ಟು ಕೂಗಿ ಹೇಳುತ್ತಿದ್ದರು, ಅವರು ಹೋದ ಬಳಿಕ ನಾನು ಕೆಳಗಿಳಿದು ತಿನ್ನುತ್ತಿದ್ದೆ. ನಮ್ಮ ಮನೆಯಲ್ಲಿ ಒಂದೇ ಸೌಚಾಲಯ ಅದು ಮನೆಯ ಒಳಗೇ ಇರುವುದರಿಂದ ನಾನು ಸಂಜೆಯ ಸೂರ್ಯ ಮುಳುಗಿದ ನಂತರ ಬಯಲಿಗೆ ಸೌಚಕ್ಕೆ ಹೋಗುತ್ತಿದೆ ಎಂದು ಹೇಳಿದ್ದಾರೆ.
ಶಿವ ಪಟನ್ಚೆರುವಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದು, 2020 ರ ಲಾಕ್ ಡೌನ್ ನಂತರ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದನಂತೆ ಹಾಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ತನ್ನ ಹೆಸರು ನೋಂದಾಯಿಸಿರುವುದಾಗಿ ಹೇಳಿದ್ದು, ಈಗ ಇನ್ನೊಂದೆರಡು ದಿನ ರೆಸ್ಟ್ ಮಾಡಲು ಹೇಳಿದ್ದಾರೆ. ಆನಂತರ ನಾನು ಕೆಲಸ ಪ್ರಾರಂಭ ಮಾಡುತ್ತೇನೆ, ನರೇಗಾ ಯೋಜನೆಯಲ್ಲಿ ನನ್ನ ಕೆಲಸಕ್ಕನುಗುಣವಾಗಿ 120ರಿಂದ 200 ರೂಪಾಯಿ ಸಿಗಲಿದೆ ಎಂದು ಶಿವ ತಿಳಿಸಿದ್ದಾನೆ.