ಕೊರೋನಾದಿಂದ ಹೊಟ್ಟೆಕಿಚ್ಚಾದ ಅತ್ತೆ, ಸೊಸೆಗೂ ಸೋಂಕು ಹರಡಿದಳು

ನಿನಗೂ ಕೊರೋನಾ ಹರಡಲಿ ಎಂದು ಸೊಸೆಯನ್ನು ತಬ್ಬಿಕೊಂಡ ಸೋಂಕಿತ ಅತ್ತೆ

 | 
Representative Image

ಹೈದರಾಬಾದ್: ಕೋವಿಡ್ ಸೋಂಕು ತಗುಲಿ ಪ್ರತ್ಯೇಕ ವಾಸದಲ್ಲಿದ್ದ ಮಹಿಳೆಯೊಬ್ಬರು ಹೊಟ್ಟೆಕಿಚ್ಚಿನಿಂದ ತನ್ನ ಸೊಸೆಗೂ ಕೊರೋನಾ ವೈರಸ್ ತಗುಲಬೇಕೆಂದು ಭಾವಿಸಿ ಬಲವಂತದಿಂದ ತಬ್ಬಿಕೊಂಡು ಸೋಂಕು ಹರಡಿರುವ ಘಟನೆ ತೆಲಂಗಾಣದ ಸೊಮಾರಿಪೆಟಾ ಗ್ರಾಮದಲ್ಲಿ ನಡೆದಿದೆ.

ಸೊಸೆಗೆ ಕೊರೋನಾ ದೃಢಪಟ್ಟ ನಂತರ, ಆಕೆಯನ್ನು ಮನೆಯಿಂದ ಹೊರಹಾಕಲಾಗಿದೆ. ಮನೆಯಿಂದ ಹೊರದೂಡಿದ ನಂತರ ದಿಕ್ಕು ತೋಚದೆ ನಿಂತಿದ್ದ ಮಹಿಳೆಯನ್ನು ಆಕೆಯ ಸಹೋದರಿ ಬಂದು ರಾಜಣ್ಣ ಸಿರ್ಕಿಲ್ಲ ಜಿಲ್ಲಿಯ ತಿಮ್ಮಾಪುರದಲ್ಲಿರುವ ಪೋಷಕರ ಮನೆಗೆ ಕರೆದೋಯ್ದು ಹಾರೈಕೆ ಮಾಡುತ್ತಿದ್ದಾರೆ.

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಆಕೆ ನಮ್ಮ ಅತ್ತೆಗೆ ಕೊರೋನಾ ದೃಢಪಟ್ಟ ನಂತರ ಎಲ್ಲರೂ ಆಕೆಯಿಂದ ಅಂತರ ಕಾಯ್ದುಕೊಂಡ ಹಿನ್ನೆಲೆ ಆಕೆ ನಿರಾಶಗೊಂಡರು, ಆದ್ದರಿಂದ ನೀನಗೂ ಸಹ ಕೋವಿಡ್ ಹರಡಲೆಂದು ಹೇಳಿ ತಬ್ಬಿಕೊಂಡರು ಎಂದು ಹೇಳಿದ್ದಾರೆ.

ಪ್ರತ್ಯೇಕ ವಾಸದಿಂದ ದೃತಿಗೆಟ್ಟ ಅವರು ನಾನು ಕೊರೋನಾ ದಿಂದ ಸತ್ತರೆ ನೀವು ಸಂತೋಷದಿಂದ ಬದುಕಬೇಕು ಎಂದು ತಿಳಿದಿದ್ದೀರಾ? ಎಂದು ಹೇಳಿ ನನ್ನ ಬಲವಂತದಿಂದ ತಬ್ಬಿಕೊಂಡರು ಎಂದು ಹೇಳಿದ್ದು, ಈಗ ತಮ್ಮ ಪೋಷಕರ ಮನೆಯಲ್ಲಿ ಪ್ರತ್ಯೇಕ ವಾಸವಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.