ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸತ್ತು ಬಿದ್ದ ಆಕಳು. ಕಣ್ಣೆತ್ತಿಯೂ ನೋಡದ ಅಧಿಕಾರಿಗಳು..!

ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳಿಂದ ತೀವ್ರ ಆಕ್ರೋಶ

 | 
ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸತ್ತು ಬಿದ್ದ ಆಕಳು. ಕಣ್ಣೆತ್ತಿಯೂ ನೋಡದ ಅಧಿಕಾರಿಗಳು..!

ಬೆಳಗಾವಿ: ಬೆಳಗಾವಿಯನ್ನು ಅದು ಹೇಗೆ ಸ್ಮಾರ್ಟ ಸಿಟಿ ಎನ್ನಬೇಕೋ ತಿಳಿಯುತ್ತಿಲ್ಲ. ಯಾಕೆಂದರೆ ಇಲ್ಲಿ ಸರ್ಕಾರಿ ಕಚೇರಿ ಆಚರಣದಲ್ಲಿಯೇ ಜಾನುವಾರುವೊಂದು ಸತ್ತು ಬಿದ್ದರೂ ಅದನ್ನು ಒಯ್ಯುವವರು ಯಾರೂ ದಿಕ್ಕೆ ಇಲ್ಲದಂತಾಗಿದೆ. ಇದರಿಂದ ಇಲ್ಲಿನ ಸ್ಥಳೀಯರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹೌದು, ಹೀಗೆ ಸತ್ತು ಬಿದ್ದಿರುವ ಆಕಳು, ಯಾವಾಗ ಮಾಂಸವನ್ನು ಹರಿದುಕೊಂಡು ತಿನ್ನಲಿ ಎಂದು ಅತ್ತಿಂದಿತ್ತ ಇಂತಿದಿತ್ತ ಓಡಾಡುತ್ತಿರುವ ನಾಯಿಗಳು. ಪಕ್ಕದಲ್ಲಿಯೇ ತಹಶೀಲ್ದಾರ್ ಕಚೇರಿ. ಆತಂಕದಲ್ಲಿರುವ ಸ್ಥಳೀಯರು ಹೌದು ನೀವು ನೋಡುತ್ತಿರುವ ದೃಶ್ಯ ಬೆಳಗಾವಿಯ ರಿಸಾಲ್ದಾರ್ ಗಲ್ಲಿಯಲ್ಲಿರುವ ತಹಶೀಲ್ದಾರ್ ಕಚೇರಿ ಆಚರಣದಲ್ಲಿ ಬಿಡಾಡಿ ಆಕಳೊಂದು ಮೃತಪಟ್ಟಿರುವ ದೃಶ್ಯವನ್ನು ಅನಾರೋಗ್ಯದಿಂದ ನಿನ್ನೆಯೇ ಆಕಳು ತಹಶೀಲ್ದಾರ್ ಕಚೇರಿ ಆವರಣದಲ್ಲಿಯೇ ಸಾವನ್ನಪ್ಪಿದೆಯಂತೆ. ತಕ್ಷಣವೇ ಇಲ್ಲಿನ ಸ್ಥಳೀಯರು ಪಾಲಿಕೆ ಅಧಿಕಾರಿಗಳಿಗೆ ಆಕಳ ಶವವನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ್ರೂ ಕೂಡ ಯಾವೊಬ್ಬ ಅಧಿಕಾರಿಗಳು ಇತ್ತ ಬಂದಿಲ್ಲವಂತೆ. ಇದರಿಂದ ಪಾಲಿಕೆ ಅಧಿಕಾರಿಗಳ ವಿರುದ್ಧ ಇಲ್ಲಿನ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಇನ್‍ನ್ಯೂಸ್ ಜೊತೆ ಮಾತನಾಡಿದ ಇಲ್ಲಿನ ಮಹಿಳೆಯರು ಇಲ್ಲಿ ಆಕಳು ಸತ್ತು ಬಿದ್ದರೂ ಕೂಡ ಯಾರೂ ಇಲ್ಲಿ ನೋಡವರಿಲ್ಲ, ಯಾರೂ ಇದನ್ನು ಒಯ್ಯುವವರೂ ಇಲ್ಲ. ಮೊದಲೇ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಹುಡುಗರು ಬೇರೆ ಹೊರಗೆ ಓಡಾಡುತ್ತಿರುತ್ತಾರೆ, ಸರ್ಕಾರಿ ಕಚೇರಿ ಆವರಣದಲ್ಲಿಯೇ ಈ ರೀತಿ ಪರಿಸ್ಥಿತಿಯಾದ್ರೆ ಇನ್ನುಳಿದ ಕಡೆ ಯಾವ ರೀತಿ ಪರಿಸ್ಥಿತಿ ಇರಬೇಕು. ಆದಷ್ಟು ಬೇಗನೇ ಇದನ್ನು ತೆಗೆದುಕೊಂಡು ಹೋಗಬೇಕು ಎಂದು ಆಗ್ರಹಿಸಿದರು.

ಒಟ್ಟಾರೆ ಬೆಳಗಾವಿ ನಗರದಲ್ಲಿ ಬಹುತೇಕ ಕಡೆ ಒಂದಿಲ್ಲೊಂದು ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದರಿಂದ ಈ ರೀತಿಯಾಗಿದೆ. ಆದಷ್ಟು ಬೇಗನೇ ಆಕಳ ಶವವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡುವ ಅವಶ್ಯಕತೆಯಿದೆ.