ದಲಿತ ಕುಟುಂಬವನ್ನು ಮರಕ್ಕೆ ಕಟ್ಟಿ ಶಿಕ್ಷಿಸಿದ ದುಷ್ಕರ್ಮಿಗಳು
ಮಧ್ಯಪ್ರದೇಶದ ಶಜಾಪುರದಲ್ಲಿ ಅಮಾನವೀಯ ಘಟನೆ
ದಲಿತರ ಜಮೀನಿಗೆ ತೆರಳಿದ ದುಷ್ಕರ್ಮಿಗಳು ಅವರು ಬೆಳೆದಿದ್ದ ಬೆಳೆಯನ್ನು ನಾಶ ಮಾಡಿದ್ದಲ್ಲದೇ ಅವರನ್ನು ಮರಕ್ಕೆ ಕಟ್ಟಿಹಾಕಿ ಹೊಡೆದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಶಜಾಪುರ ಜಿಲ್ಲೆಯ ಬಿಜನಿಯಾ ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳು ಸ್ಥಳೀಯ ಮೋಹನ್ ಬರೋಡಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದರು, ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ಸುದ್ದಿಯನ್ನು ಇಂಡಿಯಾ ಟುಡೆ ವರದಿ ಮಾಡಿದೆ.
ಸಿಧನಾಥ್ ಅವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಅಲಸಂದೆ ಬೆಳೆಯನ್ನು ಯಾರೋ ನಾಶ ಮಾಡಿದ್ದಾರೆ ಎಂದು ತಿಳಿದು ಸಿಧನಾಥ್ ಮತ್ತು ಆತನ ಹೆಂಡತಿ ಮತ್ತು ಸೊಸೆ ಅವರ ಜಮೀನಿಗೆ ತೆರಳಿದಾಗ ಆರೋಪಿಗಳು 80 ವರ್ಷದ ಸಿಧನಾಥ್ ಮತ್ತು ಆತನ ಪತ್ನಿ 75 ವರ್ಷದ ರೇಶಮ್ ಬಾಯ್, ಮತ್ತು 45 ವರ್ಷದ ಸೊಸೆ ಲೀಲಾ ಬಾಯ್ ಅವರ ಮೇಲೆ ಹಲ್ಲೆ ನಡೆಸಿ ಮರಕ್ಕೆ ಕಟ್ಟಿಹಾಕಿ ಶಿಕ್ಷಿಸಿದ್ದಾರೆ. ಇದನ್ನು ಗಮನಿಸಿದ ಅಪ್ರಾಪ್ತ ಮೊಮ್ಮಗ ಇವರನ್ನು ಬಿಡಿಸಿ ಮನೆಗೆ ಕರೆತಂದಿದ್ದಾನೆ.
ಸಿಧನಾಥ್ ತಮ್ಮ ಜೀವನೋಪಾಯಕ್ಕಾಗಿ 2.5 ಬಿಘಾ ಜಮೀನನ್ನು ಸರ್ಕಾರದಿಂದ ಪಡೆದುಕೊಂಡಿದ್ದರು, ಈ ಜಮೀನಿನ ಮೇಲೆ ಅದೇ ಗ್ರಾಮದ ಲಕ್ಷ್ಮೀಚಾಂದ್ ಎಂಬುವವರಿಂದ ಸಾಲ ಪಡೆದಿದ್ದರು, ಸಾಲ ತೀರಸಲು ಸಾಧ್ಯವಾಗದ ಹಿನ್ನೆಲೆ ಜಮೀನನ್ನು ಎರಡು ವರ್ಷಗಳ ಕಾಲ ಲೀಸ್ ಗೆ ನೀಡಿದ್ದರು.
ಎರಡು ವರ್ಷಗಳ ತರುವಾಯ ಸಿಧನಾಥ್ ಕುಟುಂಬ ತಮ್ಮ ಜಮೀನಿನಲ್ಲಿ ಅಲಸಂದೆ ಕಾಳನ್ನು ಬಿತ್ತನೆ ಮಾಡಿದ್ದರು, ಆದರೆ ಲಕ್ಷ್ಮೀಚಾಂದ್ ನ ಇಬ್ಬರು ಮಕ್ಕಳಾದ ಸೋನು ಮತ್ತು ಅರೂಣ್ ಮತ್ತು ಇನ್ನೋರ್ವ ದಾಲ್ ಚಾಂದ್ ಸೇರಿ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಯನ್ನು ನಾಶ ಮಾಡಿದರು ಮತ್ತು ನಾವು ಇದನ್ನು ಕೇಳಿದಾಗ ನಮ್ಮ ಮೇಲೆ ಹಲ್ಲೆ ನಡೆಸಿ ಮರಕ್ಕೆ ಕಟ್ಟಿಹಾಕಿ ಶಿಕ್ಷಿಸಿದರು ಎಂದು ಸಿಧನಾಥ್ ದೂರಿನಲ್ಲಿ ತಿಳಿಸಿದ್ದಾರೆ.
ಹಾಗೆ ನಮಗೆ ಸಾಲ ನೀಡಿದ್ದ ಲಕ್ಷ್ಮೀಚಾಂದ್ ದಾಲ್ ಚಾಂದ್ ಗೆ ನಾವು ಜಮೀನನ್ನು ಮಾರಾಟ ಮಾಡಿರುವುದಾಗಿ ನಖಲಿ ಪತ್ರಗಳನ್ನು ದಾಲ್ ಚಾಂದ್ ಜಮೀನಿನ ಒಡೆಯನೆಂದು ಹೇಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಸಿಧನಾಥ್ ದೂರು ನೀಡಲು ಸತತ ಪ್ರಯತ್ನ ನಡೆಸಿದ ಒಂದು ದಿನದ ನಂತರ ದೂರು ಸ್ವೀಕರಿಸಿರುವ ಪೊಲೀಸರು ಈಗ ದೂರು ಸ್ವೀಕರಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.