ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ್ ಕಾರು ಬೈಕ್ ಗೆ ಡಿಕ್ಕಿ

ಬೈಕ್ ಸವಾರ ನೋರ್ವ ಸಾವು

 | 
Accident

ಬಾಗಲಕೋಟೆ: ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿಯವರ ಕಾರು ಬೈಕ್ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮ ಕ್ರಾಸ್ ಬಳಿ ನಡೆದಿದೆ.

ಈ ದುರ್ಘಟನೆಯಲ್ಲಿ ಸುಮಾರು 55ವರ್ಷ ವಯಸ್ಸಿನ ರೈತ ಕೂಡಲೆಪ್ಪ ಬೋಳಿ ಎಂಬುವವರು ತೀವ್ರ ಗಾಯಗೊಂಡು ನಿಧನರಾಗಿದ್ದಾರೆ. ಹೊಲಕ್ಕೆ ತೆರಳಿ ವಾಪಾಸ್ ಬರುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಮೃತ ಕೂಡಲೇಪ್ಪ ಬೋಳಿ ಬಾಗಲಕೋಟೆಯ ಚಿಕ್ಕಹಂಡರಗಲ್ ನಿವಾಸಿಯಾಗಿದ್ದು, ವಿಜಯಪುರ ಮಾರ್ಗವಾಗಿ ತೆರಳುತ್ತಿದ್ದ ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ್ ಕಾರು ಬೈಕ್ ನಲ್ಲಿ ಬರುತ್ತಿದ್ದ ಕೂಡಲೆಪ್ಪ ಬೋಳಿಯವರಿಗೆ ಗುದ್ದಿದೆ.

ಡಿಸಿಎಂ ಪುತ್ರ ಚಿದಾನಂದ್ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಹೇಳುತ್ತಿದ್ದರು, ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.