ರಾಜ್ಯಕ್ಕೂ ಕಾಲಿಟ್ಟ್ಟ ಡೆಲ್ಟಾ ಪ್ಲಸ್ ರೂಪಾಂತರಿ ಕೊರೋನಾ ವೈರಸ್

ಮೈಸೂರಿನಲ್ಲಿ ಮೊದಲ ಪ್ರಕರಣ ಪತ್ತೆ

 | 
Representative Image

ಮೈಸೂರು: ದೇಶದಲ್ಲಿ ಆತಂಕ ಸೃಷ್ಟಿಸಿರುವ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕರ್ನಾಟಕಕ್ಕೂ ಕಾಲಿಟ್ಟಿದೆ.  ರೋಗಲಕ್ಷಣವಿಲ್ಲದ ಕೊರೋನಾ ರೋಗಿಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪತ್ತೆಯಾಗಿದೆ.  

ಕೋವಿಡ್ ಜೀನೋಮಿಕ್ ಕಣ್ಗಾವಲು ಸಮಿತಿಯ ಅಧ್ಯಕ್ಷ ಡಾ.ವಿ.ರವಿ ಅವರು ಮೈಸೂರಿನಲ್ಲಿ ಮೊದಲ ಡೆಲ್ಟಾ ಪ್ಲಸ್ ಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ. ಈ ರೂಪಾಂತರವು ಹೆಚ್ಚು ಹರಡುವುದಿಲ್ಲ. ಆದರೆ ಕೇವಲ ಸಾಮಾಜಿಕ ಮಾಧ್ಯಮಗಳ ವದಂತಿಯಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ ಎರಡು ಪ್ರಕರಣಗಳು ಪತ್ತೆಯಾಗಿವೆ. ಎನ್‌ಸಿಬಿಎಸ್‌ನಲ್ಲಿ ಪರೀಕ್ಷಿಸಿದ ಮಾದರಿಗಳಲ್ಲಿ ಒಂದು ವಾಸ್ತವವಾಗಿ ತಮಿಳುನಾಡಿನಿಂದ ಬಂದಿದೆ. ಹೀಗಾಗಿ ಕರ್ನಾಟಕದಲ್ಲಿ ಇದು ಮೊದಲ ಪ್ರಕರಣವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಭಾರತದಲ್ಲಿ ಇದುವರೆಗೆ 8572 ರೂಪಾಂತರಗಳನ್ನು ಪತ್ತೆಹಚ್ಚಿದೆ. ಡೆಲ್ಟಾ ಪ್ಲಸ್ ರೂಪಾಂತರ ಮೂರನೇ ಅಲೆಗೆ ಕಾರಣವಾಗುತ್ತದೆ ಎಂದು ತಿಳಿದಿಲ್ಲ. ಆದರೆ, ನಾವು ಜಾಗರೂಕರಾಗಿರಬೇಕು. ಮೂರನೇ ಅಲೆಗೆ ಯಾವ ರೂಪಾಂತರ ಕಾರಣವಾಗಲಿದೆ ಎಂದು ತಿಳಿದಿಲ್ಲ ಎಂದು ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.