ಸಾಲಭಾದೆ ತಾಳಲಾರದೆ ಇಂಗಳಿ ಗ್ರಾಮದ ರೈತ ನೇಣಿಗೆ ಶರಣು…
ಕೃಷಿ ಪತ್ತಿನ ಸಹಕಾರಿ ಬ್ಯಾಂಕು ಸೇರಿ ವಿವಿಧ ಖಾಸಗಿ ಬ್ಯಾಂಕುಗಳು ಸಾಲ ಮಾಡಿದ್ದ ರೈತ
May 4, 2021, 19:12 IST
| 
ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗಾವಠಾಣ ಗ್ರಾಮದ 60 ವಯಸ್ಸಿನ ದಯಾನಂದ ಶಂಕರ ಜಾಧವ ಎನ್ನುವ ರೈತ ಸಾಲಭಾದೆ ತಾಳಲಾರದೆ ಆತ್ಮಹತ್ಯೆಯನ್ನು ಮಾಡಿಕೊಂಡಿರುವ ಘಟನೆ ನಡೆದಿದೆ.
ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕು ಸೇರಿದಂತೆ ವಿವಿಧ ಖಾಸಗಿ ಬ್ಯಾಂಕುಗಳು ಸೇರಿ ಸುಮಾರು 7 ಲಕ್ಷರೂಪಾಯಿ ಸಾಲವನ್ನು ಮಾಡಿಕೊಂಡಿದ್ದನು ಎಂದು ಹೇಳಲಾಗುತ್ತಿದೆ. ಮಾಡಿದ ಸಾಲವನ್ನು ತಿರಿಸಲಾಗದೆ ಮನನೊಂದ ದಯಾನಂದ ಶಂಕರ ಜಾಧವ ಎನ್ನುವ ರೈತ ನಿನ್ನೆ ಸಾಯಂಕಾಲ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂಕಲಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.