ಪಡಿತರ ಪಡೆಯೋಕೆ ಬೆರಳಚ್ಚು ಕಡ್ಡಾಯವಲ್ಲ, ಇನ್ನು ಮುಂದೆ ಬರಲಿದೆ ಹೊಸ App
ಕೊರೋನಾ ತಡೆಗಟ್ಟುವ ಸಲುವಾಗಿ ಈ ಕ್ರಮ
May 12, 2021, 18:02 IST
| 
ಬೆಂಗಳೂರು: ಕೊರೋನಾ ಸೋಂಕು ದೇಶದೆಲ್ಲೆಡೆ ಸರವೇಗವಾಗಿ ಹಬ್ಬುತ್ತಿದೆ. ಕೊರೋನಾ ತಡೆಗೆ ಬಿಗಿ ಕ್ರಮಗಳನ್ನು ಕೈಗೊಂಡಿರುವ ಸರ್ಕಾರ ಲಾಕ್ ಡೌನ್ ಮಾಡಿದೆ. ಕೊರೋನಾ ಸೋಂಕನ್ನು ತಡೆಗಟ್ಟಲು ಪ್ರತಿ ಅಂತದಲ್ಲೂ ಯೋಚನೆ ಮಾಡಿತ್ತಿರುವ ರೋಗ್ಯ ಇಲಾಖೆ ಇದೀಗ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಬೆರಳಚ್ಚು ಕಡ್ಡಾಯವಲ್ಲ ಎಂದು ಹೇಳಿದೆ.
ಇದಕ್ಕಾಗಿ ‘ಮೇರಾ ರೇಷನ್’ ಎಂಬ ಆಪ್ ಒಂದನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ್ದು, ಇದು ಸರ್ಕಾರದ ಪಡತರ ನೀತಿಯ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಗೆ ಸಹಕಾರಿಯಾಗಲಿದೆ. ಹಾಗೆ ವಲಸೆ ಕಾರ್ಮಿಕರು ಹೆಚ್ಚು ಪ್ರಯೋಜನವಾಗಲಿದೆ. ದೇಶದ ಎಲ್ಲಾ ಬಿಪಿಎಲ್ ಕಾರ್ಡು ದಾರರು ಇದರ ಪ್ರಯೋಜನ ಪಡೆಯಬಹುದು.
ಸಧ್ಯ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಮೂಲಕ ಮೇರಾ ರೇಷನ್ ಆಪನ್ನು ಉತ್ತರಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದ್ದು, ಸಧ್ಯ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ದೇಶದ 14 ಭಾಷೆಗಳಲ್ಲಿ ಈ ಆಪ್ ಬಿಡುಗಡೆ ಮಾಡಲಾಗುತ್ತದೆ ಎಂದು ಆಪ್ ರಚಿಸಿರುವ ರಾಷ್ಟ್ರೀಯ ಮಾಹಿತಿ ಕೇಂದ್ರ ತಿಳಿಸಿದೆ.