ಉತ್ತರ ಕೋರಿಯಾದಲ್ಲಿ ಅಹಾರಕ್ಕೆ ಅಹಾಕಾರ

ದಿನಸಿ ವಸ್ತುಗಳ ಬೆಲೆ ಗಗನಕ್ಕೆ, 1ಕೆಜಿ ಬಾಳೆ ಹಣ್ಣು 3,335ರೂ.!

 | 
Kim jong Un in agriculture field

ಉತ್ತರ ಕೋರಿಯಾದಲ್ಲಿ ಆಹಾರ ಬಿಕ್ಕಟ್ಟು ಎದುರಾಗಿದೆ. ದಿನನಿತ್ಯದ ಆಹಾರ ದನಸಿ ದವಸ ಧಾನ್ಯಗಳು ಹಣ್ಣು ಅಂಪಲುಗಳ ಬೆಲೆ ಬಾರೀ ಏರಿಕೆಯಾಗಿದೆ. ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಹಾರದ ಕೊರತೆಯ ಪರಿಸ್ಥತಿಯನ್ನು ಒಪ್ಪಿಕೊಂಡಿದ್ದಾರೆ ಎಂದು ಅಲ್ಲಿನ ಕೇಂದ್ರ ನ್ಯೂಸ್ ಏಜೆನ್ಸಿ ತಿಳಿಸಿದೆ.

ಕಳೆದ ವರ್ಷ ಬಂದೆರಗಿದ ಟೈಪೂನ್ ಚಂಡಮಾರುತದ ಹೊಡೆತದಿಂದ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಿದ್ದು, ಆಹಾರ ವಸ್ತುಗಳ ಬೆಳವಣಿಗೆಯಲ್ಲಿ ಕುಸಿತ ಕಂಡಿದೆ ಈ ಕಾರಣದಿಂದ ಜನರು ಉದ್ವಿಗ್ನಗೊಳ್ಳಿವಂತಾಗಿದೆ ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾರೆ.

ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಉತ್ತರ ಕೋರಿಯಾದ ರಾಜಧಾನಿ ಪ್ಯೋಂಗ್ಯಾಂಗ್ ನಲ್ಲಿ ಒಂದು ಕೆಜಿ ಬಾಳೆಹಣ್ಣನ್ನು 3,335 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ, ಒಂದು ಪಾಕೆಟ್ ಬ್ಲಾಕ್ ಟೀ ಪುಡಿಯನ್ನು 5,190 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ, ಒಂದು ಪಾಕೆಟ್ ಕಾಫಿ ಪುಡಿಯನ್ನು 7,414 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಈ ಸಂಬಂಧ ಕೇಂದ್ರ ಉನ್ನತ ಮಟ್ಟದ ಸಭೆ ನಡೆಸಿರುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಪಕ್ಷದ ನಾಯಕರಿಗೆ ಶಿಘ್ರ ಆಹಾರ ಕೊರತೆಯ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಹೇಳಿದ್ದಾರೆ.