ಸ್ವತಂತ್ರ್ಯ ಹೋರಾಟಗಾರ ಹೆಚ್,ಎಸ್ ದೊರೆಸ್ವಾಮಿ ನಿಧನ

ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಸ್ವತಂತ್ರ್ಯ ಹೋರಾಟಗಾರ

 | 
HS Dore swamy

ಬೆಂಗಳೂರು: ಸ್ವತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿಯರು ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಹೃದಯ ಸಮಸ್ಯೆ ಎದುರಿಸುತ್ತಿದ್ದ ಅವರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇವರಿಗೆ ವಯೋಸಹಜ ಸಮಸ್ಯೆಗಳಾದ ಅಧಿಕ ಬಿಪಿ, ಬ್ರಾಂಕೈಟೀಸ್, ಹೃದಯ ಸಮಸ್ಯೆಗಳು ಇದ್ದವು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಕೆಲ ದಿನಗಳ ಹಿಂದೆ ಅವರಿಗೆ ಕೊರೋನಾ ಕಾಣಸಿಕೊಂಡಿತ್ತು ಜಯದೇವ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು, ನಂತರ ಅವರು ಮತ್ತೆ ಆಸ್ಪತ್ರೆ ಸೇರಿದ್ದ ಅವರು ನಿಧನರಾಗಿದ್ದಾರೆ.