ಗಂಗಾ ನದಿ ನೀರಿನಮಟ್ಟ ಏರಿದ ಹಿನ್ನೆಲೆ ನೀರಿನಲ್ಲಿ ತೇಲಿದ ಹೆಣಗಳು

ಊತಿಟ್ಟಿದ್ದ ಹೆಣಗಳನ್ನು ಹೊರತೆಗೆದು ಸುಡುತ್ತಿದ್ದಾರೆ ಅಧಿಕಾರಿಗಳು

 | 
Cremating of bodies PC India today

ಪ್ರಯಾಗ್ ರಾಜ್: ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆ ಗಂಗಾ ನದಿತಟದ ಮರಳಿನಲ್ಲಿ ಊಳಲಾಗಿದ್ದ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಿಂದ ಸಾವನ್ನಪ್ಪಿದ್ದ ಮೃತದೇಹಗಳು ತೇಲಲಾರಂಭಿಸಿವೆ ಎಂದು ನ್ಯೂಸ್18 ಮತ್ತು ಇಂಡಿಯಾ ಟುಡೆ ವರದಿ ಮಾಡಿವೆ.

ನದಿ ದಡದ ಮರಳಿನಲ್ಲಿ ಊತಿಟ್ಟಿದ್ದ ಮೃತದೇಹಗಳು ಗಂಗೆಯಲ್ಲಿ ತೇಲುತ್ತಿರುವ ಹಿನ್ನೆಲೆ ಊಳಲಾಗಿರುವ ಮೃತದೇಹಗಳನ್ನು ಮತ್ತೆ ಹೊರತೆಗೆದು ಅವುಗಳನ್ನು ಸರಿಯಾದ ಕ್ರಮದಲ್ಲಿ ಪ್ರಾಧಿಕಾರದ ಅಧಿಕಾರಿಗಳು ಸುಡುತ್ತಿದ್ದಾರೆ. ಇದರಿಂದ ಪ್ರಾಧಿಕಾರದ ಅಧಿಕಾರಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಬಿದ್ದಂತಾಗಿದೆ.

ಕಳೆದ ಮೂರು ವಾರಗಳಿಂದ ಉತ್ತರಪ್ರದೇಶದ ಫಾಫಾಮೌ ಘಾಟ್ ಬಳಿ ಹಿಂದೆ ಊಳಲಾಗಿದ್ದ ನೂರುಕ್ಕೂ ಹೆಚ್ಚು ಮೃತದೇಹಗಳನ್ನು ಮರಳಿನಿಂದ ಹೊರತೆಗೆದು ಸುಡಲಾಗಿದೆ, ಫಾಫಾಮೌ ಘಾಟ್ ನಲ್ಲಿ ಶುಕ್ರವಾರ 11 ಹಾಗೂ ಗುರುವಾರ 22 ಮೃತದೇಹಗಳನ್ನು ಹೊರತೆಗೆದು ಸುಡಲಾಗಿದೆ.

ಮೃತದೇಹಗಳನ್ನು ಹೀಗೆ ಬಿಟ್ಟರೆ ಗಂಗೆಯ ನೀರಿನ ಮಟ್ಟ ಹೆಚ್ಚಾದಂತೆ ಹೆಣಗಳು ತೇಲಿ ಇದರಿಂದ ಗಂಗಾ ನದಿಯಲ್ಲಿ ಮಾಲೀನ್ಯ ಹೆಚ್ಚಾಗಲಿದೆ, ಮಾಲೀನ್ಯ ತಗ್ಗಿಸಲು ಸರ್ಕಾರದ ನಿರ್ದೇಶನ ಮತ್ತು ಪ್ರಯಾಗ್ ರಾಜ್ ಮೇಯರ್ ಅಭಿಲಾಷ್ ಗುಪ್ತ ನಂದಿ ಅವರ ಆದೇಶದಂತೆ ಸರಿಯಾದ ರೀತಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುತ್ತಿದೆ ಎಂದು ಏರಿಯಾದ ಜೋನಾಲ್ ಅಧಿಕಾರಿ ನೀರಜ್ ಸಿಂಗ್ ಹೇಳಿದ್ದಾರೆ.