ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ

25.50 ರೂಪಾಯಿಗಳನ್ನು ಹೆಚ್ಚಿಸಿದ ತೈಲ ಕಂಪನಿಗಳು

 | 
Representative Image

ನವದೆಹಲಿ: ಗೃಹ ಬಳಕೆ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಏರಿಕೆಯಾಗಿದೆ. ಪ್ರತಿ ಸಿಲಿಂಡರ್ ನ ಬೆಲೆಯಲ್ಲಿ 25.50 ರೂಪಾಯಿಗಳ ಮೊತ್ತವನ್ನು ತೈಲ ಕಂಪನಿಗಳು ಹೆಚ್ಚಿಸಿದ್ದು, ಈ ದರ ಇಂದಿನಿಂದಲೇ ಜಾರಿಗೆ ಬರಲಿದೆ.

ದೆಹಲಿಯಲ್ಲಿ 14.2 ಕೆಜಿ ತೂಕದ ಸಿಲಿಂಡರ್ ಬೆಲೆ 843.50 ರೂಪಾಯಿ ಇದೆ. 19 ಕೆಜಿ ಜಿಲಿಂಡರ್ ಬೆಲೆ ಸಹ 76 ರೂಪಾಯಿಗಳನ್ನು ಹೆಚ್ಚಳ ಮಾಡಲಾಗಿದ್ದು, 19 ಕೆಜಿ ಜಿಲಿಂಡರ್ ಬೆಲೆ ಈಗ 1,550 ರೂಪಾಯಿಗೆ ಏರಿಕೆಯಾಗಿದೆ.

ಮುಂಬೈ ಮತ್ತು ಕೊಲ್ಕತ್ತಾದಲ್ಲಿ 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಬೆಲೆ 834,50 ರೂಪಾಯಿ ಆಗಿದ್ದು, ಬೆಂಗಳೂರಿನಲ್ಲಿ 837.5 ರೂಪಾಯಿ ಮತ್ತು 19 ಕೆಜಿ ಸಿಲಿಂಡರ್ ನ ಬೆಲೆ 1617 ರೂಪಾಯಿಗೆ ಮುಟ್ಟಿದೆ.

ಕಳೆದ ಆರು ತಿಂಗಳಲ್ಲಿ ಪ್ರತಿ ಸಿಲಿಂಡರ್ ನ ಬೆಲೆಯಲ್ಲಿ 140 ರಷ್ಟು ಹೆಚ್ಚಳವಾಗಿದ್ದು, ತೈಲ ಬೆಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲೂ ಏರಿಕೆಯಾಗುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.