ಜನರ ಸಂಚಾರ ತಡೆಯುವುದೆ ಲಾಕ್ಡೌನ್ ಎಂದು ಭಾವಿಸಿದೆ ಸರ್ಕಾರ: ಹೆಚ್ಡಿಕೆ

ಸರ್ಕಾರ ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳದಿರುವುದು ದುರಂತ

 | 
ಜನರ ಸಂಚಾರ ತಡೆಯುವುದೆ ಲಾಕ್ಡೌನ್ ಎಂದು ಭಾವಿಸಿದೆ ಸರ್ಕಾರ: ಹೆಚ್ಡಿಕೆ

ಬೆಂಗಳೂರು: ಜನರ ಸಂಚಾರ ತಡೆಯುವುದನ್ನು ಲಾಕ್ ಡೌನ್ ಎಂದು ಭಾವಿಸಿರುವ ರಾಜ್ಯ ಸರ್ಕಾರ ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳದಿರುವುದು ದುರಂತ ಎಂದು ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಜನರ ಹಿತಕ್ಕಾಗಿ ಲಾಕ್ ಡೌನ್ ಮಾಡುವ ಬದಲು ಜನ ತಮ್ಮ ಅಗತ್ಯತೆಗೆ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿದು ಹಿಂಸಿಸುವ ಲಾಖ್ ಡೌನ್ ಮಾಡಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೇರಳ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮಬಂಗಾಳ ರಾಜ್ಯಗಳು ಪೂರ್ವ ಸಿದ್ಧತೆ ಮಾಡಿಕೊಂಡು ಜನರಿಗೆ ಆಹಾರ ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು ನೀಡಿ ಲಾಕ್ ಡೌನ್ ಮಾಡಿವೆ. ಆಂಧ್ರದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇಲ್ಲಿನ ಸರ್ಕಾರ ಬೇಜವಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ಅಣತಿಯಂತೆ ಬಡ ಜನರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡದೆ ಲಾಕ್ಡೌನ್ ಮಾಡಿದ್ದು, ಜನ ಹೇಗೆ ಬದುಕಬೇಕು ಎಂದು ಕೇಳಿದರು.

ಜನ ತಮ್ಮ ಅಗತ್ಯತೆಗೆ ಮನೆಗಳಿಂದ ಹೊರಬಂದಾಗ ಅವರೆ ಮೇಲೆ ದರ್ಪ ತೋರುವುದನ್ನು ಬಿಟ್ಟು, ಜನ ಹೊರಗೆಬಾರದಂತೆ ಅವರ ಅಗತ್ಯತೆಗಳನ್ನು ಪೂರೈಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳುವತ್ತಾ ಗಮನಹರಿಸಬೇಕು, ಈ ವಿಚಾರದಲ್ಲಿ ನೆರೆ ರಾಜ್ಯಗಳು ಕೈಗೊಂಡಿರುವ ಕ್ರಮಗಳತ್ತ ಗಮನಹರಿಸಬೇಕು ರಂದು ಕುಮಾರಸ್ವಾಮಿ ತಿಳಿಸಿದ್ದಾರೆ.