ರಾಜ್ಯಪಾಲರು ಸರ್ಕಾರವನ್ನು ವಜಾ ಮಾಡಬೇಕು: ಸಿದ್ದರಾಮಯ್ಯ

ಬಿಜೆಪಿಯ ಒಳ ಜಗಳದಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿತ

 | 
siddharamaiah

ಬೆಂಗಳೂರು: ರಾಜ್ಯಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ ನಂತರ ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಬಿರುಸಿನ ರಾಜಕೀಯ ಚಟುವಟಿಗಳು ನಡೆಯುತ್ತಿವೆ. ನಿನ್ನೆಯಿಂದ ಸಿಎಂ, ಸಚಿವರು, ಬಂಡಾಯ ಶಾಸಕರ ಜೊತೆ ಸಭೆಗಳ ಮೇಲೆ ಸಭೆಗಳು ನಡೆಯುತ್ತಿವೆ.

ಈ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಯ ಒಳ ಜಗಳದಿಂದ ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಈ ಹಿನ್ನೆಲೆ ರಾಜ್ಯಪಾಲರು ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು

ರಾಜ್ಯದಲ್ಲಿ ಕೊವೀಡ್ ನಿರ್ವಹಣೆ ಕಡೆ ಸಿಎಂ ಬಿ.ಎಸ್​.ಯಡಿಯೂರಪ್ಪ ಗಮನ ಕೊಡಬೇಕಿತ್ತು. ಆದರೆ ಸಿಎಂ ಯಡಿಯೂರಪ್ಪ ಶಾಸಕ, ಸಚಿವ ಮತ್ತು ಪಕ್ಷದ ಹೈಕಮಾಂಡ್ ನಾಯಕರ ಕೈಕಾಲಿಡಿದು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಂತವರಿಗೆ ಕಿವಿ ಹಿಂಡಿ ಬುದ್ದಿ ಹೇಳಬೇಕಾದ ಹೈಕಮಾಂಡ್, ತಾನೇ ರಾಜ್ಯದ ನಾಯಕರನ್ನು ಪರಸ್ಪರ ಎತ್ತಿ ಕಟ್ಟಿ ಕಳ್ಳಾಟ ಆಡುತ್ತಿದೆ ಎಂದು ಕಿಡಿ ಕಾರಿದರು.

ರಾಜ್ಯದ ಹಿತಾಸಕ್ತಿಗೆ ಮಾರಕವಾಗಿರುವ ಈ ಭಿನ್ನಮತವನ್ನು ಪ್ರಧಾನಿ. ನರೇಂದ್ರ ಮೋದಿ ನಿಯಂತ್ರಣ ಮಾಡುತ್ತಿಲ್ಲ. ಆ ಮೂಲಕ ದುರ್ಬಲ ನಾಯಕನೆಂದು ಸಾಬೀತು ಮಾಡಿದ್ದಾರೆ. 56 ಇಂಚಿನ ಎದೆಯವನು ಎಂದು ಕೊಚ್ಚಿಕೊಳ್ಳುವ ನರೇಂದ್ರ ಮೋದಿಯವರು, ತನ್ನ ಎದೆ ಸುತ್ತಳತೆ ಎಷ್ಡಿದೆ ಎನ್ನುವುದನ್ನಾದರ ಸ್ಪಷ್ಟಪಡಿಸಲಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.