ಅಪ್ರಾಪ್ತ ಹುಡುಗನ ಜೊತೆ ಓಡಿಹೋದ ಹರಿಯಾಣದ ಶಿಕ್ಷಕಿ

ಶಿಕ್ಷಕಿ ವಿರದ್ಧ ದೂರು ನೀಡಿದ ಹುಡುಗನ ಪೋಷಕರು

 | 
Blurred image

ಪಾಣಿಪತ್: ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಸಂಬಂಧ ತುಂಬಾ ಪವಿತ್ರವಾದದ್ದು, ಆದರೆ ಹರಿಯಾಣದ ಪಾಣಿಪತ್ ನಗರದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕಿಯ ಸಂಬಂಧ ಪಾವಿತ್ರ್ಯತೆಗೆ ತದ್ವಿರುದ್ಧವಾಗಿ ಹೋಗಿದೆ. ಯಾಕೆಂದರೆ, 11ನೇ ತರಗತಿಯ ಹುಡುಗನಿಗೆ ಟ್ಯೂಷನ್ ನಲ್ಲಿ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿ ಹುಡುಗನನ್ನು ಕರೆದುಕೊಂಡು ಓಡಿಹೋಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ ಎಂದು ನ್ಯೂಸ್18 ವರದಿ ಮಾಡಿದೆ.

ಹುಡುಗನಿಗೆ ಕ್ಲಾಸ್ ಟೀಚರ್ ಸಹ ಆಗಿದ್ದ ಶಿಕ್ಷಕಿ, ಕಳೆದ ವಾರ ಅಪ್ರಾಪ್ತ ವಿದ್ಯಾರ್ಥಿಯ ಜೊತೆ ಖಾಸಗಿ ಶಾಲೆಯ ಶಿಕ್ಷಕಿ ಕಾಣೆಯಾಗಿದ್ದಾಳೆ ಎಂದು ಅನುಮಾನಗಳು ಮೂಡಿದ ಹಿನ್ನೆಲೆ ಹುಡುಗನ ಪೋಷಕರು ಶಿಕ್ಷಕಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆ ಶಿಕ್ಷಕಿ ಕಳೆದ ಮೂರು ತಿಂಗಳುಗಳಿಂದ ನಮ್ಮ ಮಗನಿಗೆ ಮನೆ ಪಾಠ ಮಾಡುತ್ತಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಮೇ 29ನೇ ತಾರೀಖು ಮಧ್ಯಾಹ್ನ 2 ಗಂಟೆಗೆ 17 ವರ್ಷದ ನಮ್ಮ ಮಗ ಮನೆ ಪಾಠಕ್ಕೆಂದು ದೇಶ್ ರಾಜ್ ಕಾಲೋನಿಯಲ್ಲಿರುವ ಶಿಕ್ಷಕಿಯ ಮನೆಗೆ ಹೋದ, ಲಾಕ್ ಡೌನ್ ಇರುವುದರಿಂದ ಆಕೆ ಪ್ರತಿ ದಿನ 4 ಗಂಟೆಗಳ ಕಾಲ ಪಾಠ ಹೇಳಿಕೊಡುತ್ತಿದ್ದಳು, ಸಾಯಂಕಾಲದ ವರೆಗೆ ಕಾಯ್ದು ಕಾಯ್ದು ಬೇಸರವಾದ ನಂತರ ತಮ್ಮ ಮಗನ ಸುರಕ್ಷತೆಗೆ ಹೆದರಿದ ಪೋಷಕರು ಶಿಕ್ಷಕಿಯ ಪೋಷಕರನ್ನು ಕೇಳಲಾಗಿದೆ ಎಂದು ಪೋಷಕರು ಹೇಳಿದ್ದಾರೆ.

ಶಿಕ್ಷಕಿ ಮದುವೆಯಾದ ಗಂಡನಿಗೆ ವಿಚ್ಛೇದನ ನೀಡಿ ಪೋಷಕರು ಜೊತೆಯಲ್ಲಿದ್ದು, ಶಿಕ್ಷಕಿಯ ಪೋಷಕರು ಆಕೆ ಕಾಣಿಸಿಕೊಳ್ಳದುದರ ಬಗ್ಗೆ ಮಾತನಾಡಲಿಲ್ಲ ನಂತರ ಶಿಕ್ಷಕಿಯ ತಂದೆ ಆಕೆ ಕಾಣೆಯಾಗಿರುವುದರ ಬಗ್ಗೆ ಹುಡುಗನ ತಂದೆಯ ಜೊತೆ ಹೇಳಿದ್ದಾನೆ. ಆನಂತರ ಹುಡುಗನ ಪೋಷಕರು ನಮ್ಮ ಹುಡುಗನನ್ನು ಅಪಹರಣ ಮಾಡಿದ್ದಾರೆ ಎಂದು ಪೋರ್ಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದಾರೆ.