ಗೋಮುತ್ರ ಜೀವ ರಕ್ಷಕ ಎಂದು ಮತ್ತೆ ನಾಲಿಗೆ ಹರಿಬಿಟ್ಟ ಬಿಜೆಪಿ ಎಂಪಿ ಪ್ರಗ್ಯಾ

ನಾನು ಪ್ರತಿನಿತ್ಯ ಗೋಮುತ್ರ ಸೇವಿಸುತ್ತೇನೆ ಆದ್ದರಿಂದ ನನಗೆ ಕೊರೋನಾ ಇಲ್ಲಾ

 | 
ಗೋಮುತ್ರ ಜೀವ ರಕ್ಷಕ ಎಂದು ಮತ್ತೆ ನಾಲಿಗೆ ಹರಿಬಿಟ್ಟ ಬಿಜೆಪಿ ಎಂಪಿ ಪ್ರಗ್ಯಾ

ಭೋಪಾಲ್: ಹಸುವಿನ ಮೂತ್ರ ಮತ್ತು ಸಗಣಿಗಳು ಕೊರೋನಾ ಗುಣಮುಖವಾಗಲು ಯಾವುದೇ ಸಹಾಯ ಮಾಡಲಾರವು ಎಂದು ವೈಧ್ಯರು ಮತ್ತು ತಜ್ಞರ ಮತ್ತು ಐಎಂಎ ಹೇಳಿತ್ತಿದ್ದರೆ, ಇತ್ತ ಕೋವಿಡ್ ನಿಂದ ಉಂಟಾಗುವ ಶ್ವಾಸಕೋಶದ ಸೋಂಕನ್ನು ಗೋಮುತ್ರ ಗುಣಪಡಿಸುತ್ತದೆ ಎಂದು ಬಿಜೆಪಿ ಎಂಪಿ ಪ್ರಗ್ಯಾ ಥಾಕೂರ್ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಹಾಗೆ, ತಾನು ಕೊರೋನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಪ್ರತಿನಿತ್ಯ ಗೋ ಮೂತ್ರ ಸೇವಿಸುತ್ತಿರುವುದಾಗಿ ಹೇಳಿದ್ದಾರೆ ಎಂದು ಎನ್ಡಿಟಿವಿ ವರಿದಿ ಮಾಡಿದೆ.

ನಾವು ಗೋ ಮೂತ್ರವನ್ನು ಪ್ರತಿನಿತ್ಯ ಸೇವಿಸಿದರೆ ಇದು ಕೋವಿಡ್ ನಿಂದ ಉಂಟಾಗುವ ಶ್ವಾಸಕೋಶದ ಸೋಂಕನ್ನು ವಾಸಿಮಾಡುತ್ತದೆ. ನನಗೆ ತುಂಬಾ ನೋವಿತ್ತು ಆದ್ದರಿಂದ ನಾನು ಗೋ ಮೂತ್ರವನ್ನು ಪ್ರತಿದಿನ ಕುಡಿಯುತ್ತಾ ಬಂದೆ. ನನಗೆ ಈಗ ಕೊರೋನಾಗೆ ಯಾವುದೇ ರೀತಿಯ ಷಧಿಯನ್ನು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಮತ್ತೆ ನನಗೆ ಕೊರೋನಾ ಇಲ್ಲ ಎಂದು ಪಕ್ಷದ ಸಭೆಯೊಂದರಲ್ಲಿ ಹೇಳಿದ್ದಾರೆ.

ಗೋಮೂತ್ರ ಕೊರೋನಾ ರಕ್ಷಕ ಎಂದು ನಾಲಿಗೆ ಹರಿಬಿಟ್ಟಿರುವ ಪ್ರಗ್ಯಾ ಥಾಕೂರ್ ಈ ಹಿಂದೆ ಗೋ ಮೂತ್ರ ಮತ್ತು ಗೋವಿನ ಉತ್ಪನ್ನಗಳ ಮಿಶ್ರಣ ತನ್ನ ಕ್ಯಾನ್ಸರ್ ಖಾಯಿಲೆಯನ್ನೇ ಗುಣಪಡಿಸಿತ್ತು ಎಂದು ಹೇಳಿದ್ದರು, ಹಾಗೆ 2020ರ ಕೋವಿಡ್ ಮೊದಲನೇ ಅಲೆಯ ವೇಳೆ ಕೊರೋನಾ ರೋಗಗುಣಲಕ್ಷಣಗಳಿಂದ ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದರು.