ಕೋವಿಡ್ ಎರಡನೇ ಅಲೆಯಲ್ಲಿ 624 ವೈದ್ಯರು ಮೃತ

ದಹಲಿಯಲ್ಲೇ ಹೆಚ್ಚು, 109 ವೈದ್ಯರು ಸಾವು

 | 
Representative Image

ನವದೆಹಲಿ: ಕೊರೋನಾ ಎರಡನೇ ಅಲೆಯಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಎಂದು ಕರೆಸಿಕೊಳ್ಳುವ 624 ವೈದ್ಯರನ್ನು ಕಳೆದುಕೊಂಡಿದೆ. ದೇಶದಲ್ಲೇ ರಾಜಧಾನಿ ದೆಹಲಿಯಲ್ಲಿ ಹೆಚ್ಚು ವೈದ್ಯರು ಮೃತಪಟ್ಟಿರುವುದಾಗಿ ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.

ದಹಲಿಯಲ್ಲಿ 109 ವೈದ್ಯರು ಮೃತಪಟ್ಟಿದ್ದರೆ ಬಿಹಾರದಲ್ಲಿ 96 ಮಂದು ವೈದ್ಯರು ಕೊವಿಡ್ ಎರಡನೇ ಅಲೆಯಲ್ಲಿ ಪ್ರಾನ ಕಳೆದುಕೊಂಡಿದ್ದಾರೆ ಎಂದು ಐಎಂಎ ಹೇಳಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದರು, ಅಲ್ಲಿ ಕೇವಲ 23 ಮಂದಿ ವೈದ್ಯರು ಮೃತಪಟ್ಟಿರುವುದಾಗಿ ವೈದ್ಯ ಸಂಘದ ಪ್ರತಿನಿಧಿ ಹೇಳಿದ್ದಾರೆ. ಹಾಗೆ ಉತ್ತರಪ್ರದೇಶದಲ್ಲಿ 79 ವೈದ್ಯರು, ರಾಜಸ್ಥಾನದಲ್ಲಿ 43, ಜಾರ್ಖಾಂಡ್ ನಲ್ಲಿ 39, ಆಂಧ್ರಪ್ರದೇಶದಲ್ಲಿ 34, ತೆಲಂಗಾಣದಲ್ಲಿ 32 ಮತ್ತು ಗುಜರಾತ್ ನಲ್ಲಿ 31 ವೈದ್ಯರು ಮೃತಪಟ್ಟಿದ್ದಾರೆ ಎಂದು ಐಎಂಎ ತಿಳಿಸಿದೆ.

ಎರಡನೇ ಅಲೆಯಲ್ಲಿ ಕೋವಿಡ್ ಲಕ್ಷಾಂತರ ಜನರಿಗೆ ತಗುಲಿ ಲಕ್ಷಾಂತರ ಜನರ ಜೀವವನ್ನು ತೆಗೆದಿದೆ. ಈ ವೇಳೆ ವೈದ್ಯರು, ದಾದಿಯರು ಮತ್ತು ಫ್ರಂಟ್ ಲೈನ್ ವರ್ಕರ್ಗಳು ಆಸ್ಪತ್ರೆಯಿಂದ ತುಂಬಿ ತುಳುಲುತ್ತಿರುವ ರೋಗಿಗಳಿಗಾಗಿ ಹೆಚ್ಚು ಒತ್ತು ಕೆಲಸ ಮಾಡುತ್ತಿದ್ದಾರೆ. ಸಣ್ಣ ಪುಟ್ಟ ನಗರಗಳು ಮತ್ತು ಹಳ್ಳಿಗಳಲ್ಲಿ ಕೆಲಸ ಜಾಸ್ತಿ, ಕಡಿಮೆ ಸಂಬಳ ಕಲಸಗಾರರು ಕಡಿಮೆ ಈ ಕುರಿತಂತೆ ಸಮಸ್ಯೆಗಳು ಹೆದುರಾಗಿವೆ ಎಂದ ಐಎಂಎ ಹೇಳಿದೆ.