ಕಳೆದ 24 ಗಂಟೆಯಲ್ಲಿ 2.11 ಲಕ್ಷ ಕೋವಿಡ್ ಪ್ರಕರಣಗಳು ದಾಖಲು

ಕೋವಿಡ್ ಸಾವಿನ ಸಂಖ್ಯೆಯಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ

 | 
Representative Image

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 2.11 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಮತ್ತು ಕೋವಿಡ್ ನಿಂದ 3,847 ಜನರು ಮೃತಪಟ್ಟಿದ್ದಾರೆ. ಕೊರೋನಾ ಪ್ರಕರಣಗಳು ಮತ್ತೊಮ್ಮೆ ಹೆಚ್ಚಾಗಿರುವುದು ಕಂಡುಬಂದಿದ್ದು, ಸಾವಿನ ಸಂಖ್ಯೆ 4,000ಕ್ಕಿಂತಲೂ ಕಡಿಮೆ ದಾಖಲಾಗಿದೆ.  

ತಮಿಳೂನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅತಿಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ. ತಮಿಲುನಾಡಿನಲ್ಲಿ 33,764, ಕೇರಳದಲ್ಲಿ 28,798, ಕರ್ನಾಟಕಲ್ಲಿ 26,811, ಮಹಾರಾಷ್ಟ್ರದಲ್ಲಿ 24,752 ಆಂಧ್ರಪ್ರದೇಶದಲ್ಲಿ 18,285 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ.

2.11 ಲಕ್ಷ ಹೊಸ ಪ್ರಕರಣಗಳಲ್ಲಿ 62.66% ಪ್ರಕರಣಗಳು ಈ ಐದು ರಾಜ್ಯಗಳಲ್ಲಿ ದಾಖಲಾಗಿವೆ. ತಮಿಳುನಾಡು ರಾಜ್ಯದಲ್ಲಿ 15.98% ಹೊಸ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 992 ಮತ್ತು ಕರ್ನಾಟಕದಲ್ಲಿ 530 ಸಾವುಗಳು ಸಂಭವಿಸಿವೆ. ದೇಶದಲ್ಲಿ 2,83,135 ಪ್ರಕರಣಗಳು ಡಿಸ್ಚಾರ್ ಆಗಿದ್ದು,. 24,19,907 ಸಕ್ರಿಯ ಪ್ರಕರಣಗಳಿವೆ.