ದೇಶದಲ್ಲಿ 34,700 ಕೋವಿಡ್ ಪ್ರಕರಣಗಳು ಪತ್ತೆ

ಕಳೆದ 24 ಗಂಟೆಯಲ್ಲಿ 553 ಸೋಂಕಿತರು ಸಾವು

 | 
Representative Image

ನವದೆಹಲಿ: ಭಾರತದಲ್ಲಿ 24 ಗಂಟೆಯ ಳಗೆ 34,700 ಕೋವಿಡ್ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಕಳೆದ 111 ದಿನಗಳ ಹಿಂದಿನ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ಪ್ರಕರಣಗಳು ದಾಖಲಾಗಿದ್ದು, ಕಳೆದ 24 ಗಂಟೆಯ ಅವಧಿಯಲ್ಲಿ 553 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,64,357 ಕ್ಕೆ ಕುಸಿತ ಕಂಡಿದ್ದು, ಚೇತರಿಕೆಯ ಪ್ರಮಾಣ ಶೇಖಡ 97.71% ತಲುಪಿದೆ.

 ಕೇರಳ ರಾಜ್ಯದಲ್ಲಿ 8,037 ಪ್ರಕರಣಗಳು ದಾಖಲಾಗಿವೆ, ಮಹಾರಾಷ್ಟ್ರದಲ್ಲಿ 6,740 ಪ್ರಕರಣಗಳು, ತಮಿಳುನಾಡಿನಲ್ಲಿ 3,715 ಪ್ರಕರಣಗಳು, ಕರ್ನಾಟಕದಲ್ಲಿ 2,848 ಪ್ರಕರಣಗಳು, ಒಡಿಸ್ಸಾದಲ್ಲಿ 2,803 ಪ್ರಕರಣಗಳು ಪತ್ತೆಯಾಗಿದ್ದು, ಈ ಐದು ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚು ಸಾವುಗಳು ದಾಖಲಾಗಿವೆ.