ದೇಶದಲ್ಲಿ 37,154 ಕೋವಿಡ್ ಪ್ರಕರಣಗಳು ಪತ್ತೆ

ಕಳೆದ 24 ಗಂಟೆಯಲ್ಲಿ 724 ಸೋಂಕಿತರು ಸಾವು

 | 
Representative Image

ನವದೆಹಲಿ: ದೇಶದಲ್ಲಿ ಕೊರೋನಾ ಏರಿಳಿತದ ಆಟ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 37,154 ಕೋವಿಡ್ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಯಲ್ಲಿ 724 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಗುಣಮುಖರಾದವರ ಸಂಖ್ಯೆ ಏರಿಕಯಾಗುತ್ತಿರುವ ಹಿನ್ನೆಲೆ ಸಕ್ರಿಯ ಪ್ರಕರಣಗಳ ಸಂಖ್ಯೆ ಕುಸಿತ ಕಂಡಿದೆ. ಸದ್ಯ 4,50,899 ಸಕ್ರಿಯ ಪ್ರಕರಣಗಳು ಇವೆ.

ಕೇರಳ ರಾಜ್ಯದಲ್ಲಿ 12,220 ಅತಿ ಹೆಚ್ಚು ಪ್ರಕಣಗಳು ಕಾಣಿಸಿಕೊಂಡಿದ್ದು,  ಮಹಾರಾಷ್ಟ್ರದಲ್ಲಿ 8,535 ಪ್ರಕರಣಗಳು, ತಮಿಳುನಾಡಿನಲ್ಲಿ 2,775 ಪ್ರಕರಣಗಳು, ಆಂಧ್ರಪ್ರದೇಶದಲ್ಲಿ 2,665 ಪ್ರಕರಣಗಳು, ಕರ್ನಾಟಕದಲ್ಲಿ 1,978 ಪ್ರಕರಣಗಳು ಪತ್ತೆಯಾಗಿವೆ. ಕೊರೋನಾ ಸೋಂಕಿನಿಂದ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚು ಸಾವುಗಳು ದಾಖಲಾಗಿವೆ.