ದೇಶದಲ್ಲಿ 39,796 ಕೋವಿಡ್ ಪ್ರಕರಣಗಳು ಪತ್ತೆ

ಕಳೆದ 24 ಗಂಟೆಯಲ್ಲಿ 723 ಸೋಂಕಿತರು ಸಾವು

 | 
Representative Image

ನವದೆಹಲಿ: ಭಾರತದಲ್ಲಿ 24 ಗಂಟೆಯ ಳಗೆ 39,796 ಕೋವಿಡ್ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 723 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ ಮೂರು ತಿಂಗಳಿನಲ್ಲಿ ಅತೀ ಕಡೆಮೆ ಸಾವಿನ ಪ್ರಮಾಣ ಇದಾಗಿದೆ.

ಕಳೆದ 24 ಗಂಟೆ ಸಮಯದಲ್ಲಿ 42,352 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 2,97,00,430ಕ್ಕೆ ತಲುಪಿದೆ.

ಕೇರಳ ರಾಜ್ಯದಲ್ಲಿ ಹೆಚ್ಚು 12,100 ಪ್ರಕರಣಗಳು ದಾಖಲಾಗಿವೆ, ಮಹಾರಾಷ್ಟ್ರದಲ್ಲಿ 9,336 ಪ್ರಕರಣಗಳು, ತಮಿಳುನಾಡಿನಲ್ಲಿ 3,867 ಪ್ರಕರಣಗಳು, ಆಂಧ್ರಪ್ರದೇಶದಲ್ಲಿ 3,175 ಪ್ರಕರಣಗಳು, ಒಡಿಸ್ಸಾದಲ್ಲಿ 2,870 ಪ್ರಕರಣಗಳು ಪತ್ತೆಯಾಗಿದ್ದು, ಈ ಐದು ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚು ಸಾವುಗಳು ದಾಖಲಾಗಿವೆ.