ಕಳೆದ 24 ಗಂಟೆಯಲ್ಲಿ 1,00,636 ಹೊಸ ಪ್ರಕರಣಗಳು ದೃಢ

 2,427 ಮಂದಿ ಕೋವಿಡ್ ನಿಂದ ಮೃತ, ಕೊರೋನಾ ಸೋಂಕು ಇಳಿಕೆಯತ್ತ

 | 
Representative Image

ನವದೆಹಲಿ: ಭಾರತದಲ್ಲಿ ಕೋರೋನಾ ವೈರಸ್ ಹಾವಳಿ ತಗ್ಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ಎರಡು ತಿಂಗಳಿಂದ ದಾಖಲಾದ ಕಡಿಮೆ ಪ್ರಕರಣಗಳ ಸಂಖ್ಯೆಯಾಗಿದೆ.

ದೇಶದಲ್ಲಿ 1,00,636 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 2,427 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದ ಮೃತಪಟ್ಟವರ ಸಂಖ್ಯೆ ಒಟ್ಟು 3.50 ಲಕ್ಷ ಮುಟ್ಟುದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 2,89,09,975ಗೆ ತಲುಪಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, 14,01,609 ಪ್ರಕರಣಗಳು ಮಾತ್ರ ಇವೆ. ಕಳೆದ 24 ಗಂಟೆಯಲ್ಲಿ 1,74,399 ಮಂದಿ ಚೇತರಿಸಿಕೊಂಡು ಆಸ್ಪತ್ರಗಳಿಂದ ಬಿಡುಗಡೆಯಾಗಿದ್ದಾರೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.