ದೇಶದಲ್ಲಿ 44,111 ಕೋವಿಡ್ ಪ್ರಕರಣಗಳು ಪತ್ತೆ, ಕೇರಳದಲ್ಲಿ ಹೆಚ್ಚು

ಕಳೆದ 24 ಗಂಟೆಯಲ್ಲಿ 738 ಸೋಂಕಿತರು ಸಾವು

 | 
Representative Image

ನವದೆಹಲಿ: ಭಾರತದಲ್ಲಿ 24 ಗಂಟೆಯ ಳಗೆ 44,111 ಕೋವಿಡ್ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 738 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆ ಸಮಯದಲ್ಲಿ 57,477 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 2,96,05,779ಕ್ಕೆ ತಲುಪಿದೆ. ದೇಶದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 4,95,533ಕ್ಕೆ ಕುಸಿತ ಕಂಡಿದೆ.

 ಕೇರಳ ರಾಜ್ಯದಲ್ಲಿ ಅತಿ ಹೆಚ್ಚು 12,095 ಪ್ರಕರಣಗಳು ದಾಖಲಾಗಿವೆ, ಮಹಾರಾಷ್ಟ್ರದಲ್ಲಿ 8,753 ಪ್ರಕರಣಗಳು, ತಮಿಳುನಾಡು 4,230 ಪ್ರಕರಣಗಳು, ಆಂಧ್ರಪ್ರದೇಶ 3,464 ಪ್ರಕರಣಗಳು, ಕರ್ನಾಟಕ 2,984 ಪ್ರಕರಣಗಳು ಈ ಐದು ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ.