ಮದುವೆ ಆಗ್ಲಿಲ್ಲ ಅಂತಾ ಚಲನಚಿತ್ರ ನಿರ್ದೇಶಕನನ್ನೇ ಕೊಂದ ಪೋಷಕರು
ಮಗನ ಹತ್ಯೆಯಿಂದ ನನಗೆ ಪಶ್ಚಾತಾಪವಿಲ್ಲ ಎಂದ ಪೋಷಕರು
ಟೆಹ್ರಾನ್: ಇರಾನ್ ಖ್ಯಾತ ಚಿತ್ರ ನಿರ್ದೇಶಕ ಬಬಕ್ ಖೊರ್ರಂದಿನ್ ಅವರನ್ನು ಅವರ ಪೋಷಕರೇ ಬರ್ಭರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾದ ಬಬಕ್ ಖೊರ್ರಂದಿನ್ ಶವ ಏಕ್ಬತನ್ ನ ಕಸದ ಬ್ಯಾಗ್ ನಲ್ಲಿದ್ದ ಸೂಟ್ಕೇಸ್ ನಲ್ಲಿ ದೊರೆತಿದೆ. ಇದೊಂದು ಮರ್ಯಾದಾ ಹತ್ಯೆ ಎಂದು ಇರಾನ್ ನ ಚಲನಚಿತ್ರ ನಿರ್ದೇಶಕರೊಬ್ಬರು ಹೇಳಿದ್ದು, ಅವರು ಮದುವೆ ಮಾಡಿಕೊಳ್ಳದ ಹಿನ್ನೆಲೆ ಅವರ ತಂದೆ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.
ಖೊರ್ರಂದಿನ್ ರ ತಂದೆ ತಾನೇ ತನ್ನ ಮಗನನ್ನು ಹಿರಿದು ಕೊಂದಿರುವುದಾಗಿ ಒಪ್ಪಿಕೊಂಡಿದ್ದು, ಖೊರ್ರಂದಿನ್ ಅವರ ದೇಹವನ್ನು ಕತ್ತರಿಸಿ ಕಸದದಲ್ಲಿ ಎಸೆದಿದ್ದಾರೆ, ಎಂದು ಟೆಹ್ರಾನ್ ಕ್ರಿಮಿನಲ್ ಕೋರ್ಟ್ ನ ಮುಖ್ಯಸ್ಥರಾದ ಮೊಹಮ್ಮಡ್ ಶಹ್ರಿರಿ ಹೇಳಿದ್ದಾರೆ. ಹೀನ ಕೃತ್ಯ ಎಸಗಿರುವ ಹಿನ್ನೆಲೆ ಖೊರ್ರಂದಿನ್ ಪೋಷಕರಿಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊಲೆಗೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳು ಅವರ ಕುಟುಂಬ ಮತ್ತು ಮನೆಯಲ್ಲಿ ದೊರೆತಿವೆ ಎಂದು ಇರಾನ್ ಪೊಲೀಸರು ಹೇಳಿದ್ದಾರೆ.
47 ವರ್ಷದ ಬಬಕ್ ಖೊರ್ರಂದಿನ್ ಅವರು ಟೆಹ್ರಾನ್ ಯೂನಿವರ್ಸಿಟಿಯಲ್ಲಿ ಸಿನೆಮಾ ವಿಭಾಗದಲ್ಲಿ ಸ್ನಾತಕೋತರ ಪದವಿ ಪಡೆದು, 2010ರಲ್ಲಿ ಲಂಡನ್ ಗೆ ತೆರಳಿದ್ದರು, ಬಬಕ್ ಖೊರ್ರಂದಿನ್ ಆನಂತರ ವಿದ್ಯಾರ್ಥಿಗಳಿಗೆ ಕಲಿಸಲು ಇರಾನ್ ಗೆ ವಾಪಾಸ್ ಬಂದಿದ್ದರು. ಇವರು, ಕ್ರೆವೈಸ್, ಓಥ್ ಅಫ್ ಯಾಶರ್ ಸೇರಿದಂತೆ ಹಲವು ಕಿರುಚಿತ್ರಗಳನ್ನು ನಿರ್ಮಿಸಿದ್ದರು.
ನನ್ನ ಮಗ ಒಂಟಿಯಾಗಿದ್ದ ನಮಗೆ ಯಾವಾಗಲೂ ಹಿಂಸೆ ನೀಡುತ್ತಿದ್ದ, ನಾವು ಅವನ ಬಳಿ ಸುರಕ್ಷಿತವಾಗಿರಲಿಲ್ಲ, ಅವನಿಗೆ ಏನು ಬೇಕೋ ಅದನ್ನು ಮಾಡುತ್ತಿದ್ದ. ನಾನು ಮತ್ತು ಅವನ ಅಮ್ಮ ನಮ್ಮ ಗೌರವವನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ ಅವನಿಂದ ಹೊರಬರಲು ಈ ರೀತಿ ಮಾಡಿದೆವು ಎಂದು ಹೇಳಿದ್ದಾರೆಂದು ರೋಕ್ನಾ ವರದಿ ಮಾಡಿದೆ.
ಅವನನ್ನು ಹತ್ಯೆ ಮಾಡಿರುವುದರಿಂದ ನನಗೆ ಯಾವುದೇ ಪಶ್ಚಾತಾಪವಿಲ್ಲ ಎಂದು ಬಬಕ್ ತಂದೆ ಕೋರ್ಟ್ ನಲ್ಲಿ ಹೇಳಿರುವುದಾಗಿ ಬ್ಲೂಮ್ ಬರ್ಗ್ ಪತ್ರಕರ್ತ ಗೊಲ್ನರ್ ಮೊಟೆವಲ್ಲಿ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.