ಉಚಿತ ಅಂಬ್ಯುಲೆನ್ಸ್ ಸೇವೆಯೊಂದಿಗೆ ಸಾರ್ವಜನಿಕ ಸೇವೆಗೆ ನಿಂತ ಇರ್ಷಾಧ

ಅಂಬ್ಯುಲೆನ್ಸ್ ವಾಹನವನ್ನು ಉಚಿತ ಸಾರ್ವಜನಿಕ ಸೇವೆಗೆ ನೀಡಿದ ಸಾಮಾಜಿಕ ಕಾರ್ಯ

 | 
ಉಚಿತ ಅಂಬ್ಯುಲೆನ್ಸ್ ಸೇವೆಯೊಂದಿಗೆ ಸಾರ್ವಜನಿಕ ಸೇವೆಗೆ ನಿಂತ ಇರ್ಷಾಧ

ಹುಬ್ಬಳ್ಳಿ: ಕೊರೋನಾ ಹಾವಳಿ ಜಗತ್ತನ್ನೇ ತಲ್ಲಣಗೊಳಿಸಿದೆ. ಆಸ್ಪತ್ರೆಗಳೆಲ್ಲವೂ ಕಾರ್ಯ ನಿರ್ವಹಿಸುವಲ್ಲಿ ಬ್ಯೂಸಿಯಾಗಿವೆ. ಅಲ್ಲದೇ ಅಂಬ್ಯುಲೆನ್ಸ್ ಗಳು ಕೂಡ ಒತ್ತಡದಲ್ಲಿಯೇ ಕೆಲಸ ನಿರ್ವಹಿಸುತ್ತಿವೆ. ಇದೆಲ್ಲದರ ಮಧ್ಯದಲ್ಲಿ ಇಲ್ಲೊಬ್ಬ ವ್ಯಕ್ತಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾ‌ನೆ.

ಹುಬ್ಬಳ್ಳಿಯ ಇರ್ಷಾಧ ಬಲ್ಲಾಶೆಟ್ ಎಂಬುವ ವ್ಯಕ್ತಿ ಸ್ವಯಂ ಅಂಬ್ಯುಲೆನ್ಸ್ ವಾಹನವನ್ನು ಉಚಿತವಾಗಿ ಸಾರ್ವಜನಿಕ ಸೇವೆಗೆ ನೀಡಿದ್ದಾನೆ. ಸ್ವತಃ ತಾನೇ ಚಾಲನೆ ಮಾಡುವ ಮೂಲಕ ಕೋರೋನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು, ಕೊರೋನಾದಿಂದ ಮೃತಪಟ್ಟಿರುವ ಮೃತ ದೇಹಗಳನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವುದು ಮಾತ್ರವಲ್ಲದೆ ನಾನ್ ಕೋವಿಡ್ ರೋಗಿಗಳ ಚಿಕಿತ್ಸೆಗೂ ಕೂಡ ಉಚಿತವಾಗಿ ಅಂಬ್ಯುಲೆನ್ಸ್ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಹುಬ್ಬಳ್ಳಿಯ ಗಣೇಶ ಪೇಟೆಯ ನಿವಾಸಿಯಾಗಿರುವ ಇರ್ಷಾಧ ಬಲ್ಲಾಶೇಟ್ ಎಂಬುವ ವ್ಯಕ್ತಿಗೆ ಯಾರಾದರೂ ಕರೆ ಮಾಡಿ ಸಹಾಯ ಕೇಳಿದರೆ ಸಾಕು ಕೆಲವೇ ಕ್ಷಣದಲ್ಲಿ ಅಂಬ್ಯುಲೆನ್ಸ್ ಮೂಲಕ ಸಾರ್ವಜನಿಕರ ಸೇವೆಗೆ ಮುಂದಾಗುತ್ತಿದ್ದಾನೆ. ಹುಬ್ಬಳ್ಳಿ ಯಾವುದೇ ಆಸ್ಪತ್ರೆಯಿಂದ ಕರೆ ಮಾಡಿದರು ಕೂಡ ಇರ್ಷಾಧ ಸಾರ್ವಜನಿಕ ಸೇವೆಗೆ ಬರುತ್ತಾನೆ. ಅಲ್ಲದೇ ದಿನದ 24 ಗಂಟೆಯು ಸೇವೆ ಸಲ್ಲಿಸುತ್ತಿದ್ದಾನೆ. ಇನ್ನೂ ಜಾತಿ ಧರ್ಮ ಭೇದ ಭಾವ ಮರೆತು ಯಾರೇ ಸಹಾಯಕ್ಕೆ ಕರೆದರು ಹೋಗುವುದು ಇತನ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ.

ಒಟ್ಟಿನಲ್ಲಿ ಇರ್ಷಾಧ ಅವರ ಕಾರ್ಯ ಇನ್ನೂ ಹೆಚ್ಚು ಹೆಚ್ಚು ವ್ಯಾಪಿಸಲಿ. ಹೆಚ್ಚಿನ ಸೇವೆ ಮಾಡಲು ದೇವರು ಶಕ್ತಿ ನೀಡಲಿ ಎಂಬುವುದು ನಮ್ಮ ಆಶಯ…