ನಟಿ ಜಾಕ್ವಲಿನ್ ರಿಂದ ಮುಂಬೈನಲ್ಲಿ ಹಸಿದವರಿಗೆ ಉಟ ವಿತರಣೆ
ಕೊರೋನಾ ಸಂಕಷ್ಟದಲ್ಲಿ ನಿರ್ಗತಿಕರ ನೆರವಿಗೆ ಬಂದ ಬಾಲಿವುಡ್ ನಟಿ

ಮುಂಬೈ: ಸಾಂಕ್ರಮಿಕ ಮಹಾಮಾರಿ ಕೊರೋನಾ ಎರಡನೇ ಅಲೆಯಿಂದಾಗಿ ಭಾರತ ಕಠೋರ ಸ್ಥಿತಿಯಲ್ಲಿದೆ. ಇಂತಹ ಸ್ಥಿತಿಯಲ್ಲಿ ಕೆಲ ಸೆಲೆಬ್ರಿಟಿಗಳು ಸಂಕಷ್ಟದಲ್ಲಿ ಸಿಲುಕಿರುವವರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಅವಶ್ಯಕತೆ ಇರುವವರಿಗೆ ಸಹಾಯ ಮಾಡುತ್ತಿದ್ದಾರೆ. ಇಂತಹವರ ಸಾಲಿಗೆ ಶ್ರೀಲಂಕಾ ಮೂಲದ ಬಲಿವುಡ್ ನಟಿ ಜಾಕ್ವಲಿನ್ ಫರ್ನಾಂಡೀಸ್ ಸಹ ಸೇರಿದ್ದು, ನಿರ್ಗತಿಕರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಯೂ ಓನ್ಲಿ ಲಿವ್ ಒನ್ಸ್ ಎಂಬ ಫೌಂಡೇಷನ್ ಸ್ಥಾಪಿಸಿ, ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನರನ್ನು ಪ್ರೇರೇಪಿ ಸಹಯ ಮಾಡುತ್ತಿರುವ ಹಲವಾರು ಸರ್ಕಾರೇತರ ಸಂಸ್ಥೆಗಳ ಜೊತೆ ಕೈ ಜೋಡಿಸಿದ್ದು, ಮಂಬೈನ ಆ ಸಂಸ್ಥೆಗಳ ರೋಟಿ ಮನೆಗೆ ತೆರಳಿ ಅವಶ್ಯಕತೆ ಇರುವ ಜನರಿಗೆ ಊಟ ವಿತರಣೆ ಮಾಡುತ್ತಿದ್ದಾರೆ.
ರೋಟಿ ಬ್ಯಾಂಕ್ ಭೇಟಿ, ಊಟ ತಯಾರಿಸುವುದು, ಊಟ ವಿತರಿಸುತ್ತಿರುವ ತಮ್ಮ ಪೋಟೋಗಳನ್ನು ನಟಿ ಜಾಕ್ವಲಿನ್ ಫರ್ನಾಂಡೀಸ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮದರ್ ಥೆರೇಸಾ ‘ಹಸಿದವರಿಗೆ ಅನ್ನ ನೀಡುವುದರಿಂದ ಶಾಂತಿ ಪ್ರಾರಂಭವಾಗಲಿದೆ’ ಎಂದು ಹೆಳಿದ್ದಾರೆ. ಮಾಜಿ ಮುಂಬೈ ಪೊಲೀಸ್ ಕಮೀಷನರ್ ಶ್ರೀ ಡಿ.ಶಿವಾನಂದನ್ ಅವರು ನಡೆಸುತ್ತಿರುವ ರೋಟಿ ಬ್ಯಾಂಕ್ ನೋಡಿ ನಾನು ಸ್ಫೂರ್ತಿಗೊಂಡಿದ್ದೇನೆ. ಈ ರೋಟಿ ಬ್ಯಾಂಕ್ ಇಲ್ಲಿವರೆಗೆ ಲಕ್ಷಾಂತರ ಹಸಿದ ಹೊಟ್ಟಿಗೆ ಅನ್ನ ನೀಡಿದೆ ಎಂದು ಬರೆದುಕೊಂಡಿದ್ದಾರೆ.