ನಾಗರಿಕರ ಮೇಲೆ ನಿರುದ್ಯೋಗಿಯಿಂದ ಚಾಕುವಿನ ದಾಳಿ

ಆರು ಜನರ ಸಾವು 14 ಜನರಿಗೆ ಗಾಯ, ಚೀನಾದಲ್ಲಿ ಘಟನೆ

 | 
Incident place

ತಲೆಕೆಟ್ಟ ನಿರುದ್ಯೋಗಿಯೋರ್ವ ಚಾಕುವಿನಿಂದ ದಾಳಿ ನಡೆಸಿ ಆರು ಜನರನ್ನು ಅಮಾನುಷವಾಗಿ ಕೊಂದಿರುವ ಘಟನೆ ಪೂರ್ವ ಚೀನಾದ ಅನ್ಹೈ ಪ್ರಾಂತ್ಯದ ಅನ್ಕಿಂಗ್ ನಗರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಹದಿನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಹುವೈನಿಂಗ್ ಕೌಂಟಿಯ ವೂ ಎಂಬ ಹೆಸರಿನ 25 ವರ್ಷದ ನಿರುದ್ಯೋಗಿ ವ್ಯಕ್ತಿ ಕುಟುಂಬದ ಸಮಸ್ಯೆಯಿಂದ ಕೋಪಗೊಂಡು ನಾಗರಿಕರ ಮೇಲೆ ದಾಳಿ ನಡೆಸಿದ್ದಾನೆ. ಕುಟುಂಬ ಸಮಸ್ಯೆ ಮತ್ತು ನಿರಾಶಾವಾದದಿಂದ ಕೋಪಗೊಂಡು ದಾಳಿ ನಡೆಸಿರುವುದಾಗಿ ಸ್ಥಳೀಯ ಪೌರಾಡಳಿತ ತಿಳಿಸಿದೆ.

ಭಾನುವಾರದ ವರೆಗೆ ದಾಳಿಗೊಳಗಾದರಲ್ಲಿ 6 ಜನ ಮೃತಪಟ್ಟಿದ್ದು, 14 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ವ್ಯಕ್ತಿಯ ಸ್ಥಿತಿ ಮಾತ್ರ ಗಂಭೀರವಾಗಿದೆ ಇನ್ನುಳಿದ 13 ಜನರ ಸ್ಥಿತಿ ಸ್ಥಿರವಾಗಿದೆ ಎಂದು ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.  

ದಾಳಿಕೊರನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.