ಕೊರೊನಾ ಮಹಾಮಾರಿಗೆ ವಿಜಯಪುರದಲ್ಲಿ ಇನ್ನೊಬ್ಬ ಪರ್ತಕರ್ತ ಬಲಿ
ವಿಜಯಪುರದಲ್ಲಿ ಕೋವಿಡ್ ನಿಂದ ಮೃತಪಟ್ಟ ಪತ್ರಕರ್ತ
May 17, 2021, 15:09 IST
| 
ವಿಜಯಪುರ: ಮಹಾಮಾರಿ ಕೊರೊನಾಗೆ ಜಿಲ್ಲೆಯಲ್ಲಿ ಮತ್ತೊಬ್ಬ ಪತ್ರಕರ್ತ ಬಲಿಯಾಗಿದ್ದಾರೆ. ಸ್ಥಳೀಯ ಗುಂಬಜ್ ಎಕ್ಸ್‌ಪ್ರೆಸ್ ದಿನಪತ್ರಿಕೆಯ ಸಹಸಂಪಾದಕ ದತ್ತಾತ್ರೇಯ ಪನಾಳಕರ್(50) ಮೃತಪಟ್ಟಿದ್ದಾರೆ.
ಗ್ಯಾಂಗ್ ಬಾವಡಿ ನಿವಾಸಿಯಾಗಿದ್ದ ಇವರಿಗೆ ಕಳೆದ ಕೆಲವು ದಿನಗಳ ಹಿಂದೆ ಕೋವಿಡ್ ದೃಢವಾಗಿದ್ದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.ಈ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಕೋವಿಡ್ಗೆ ನಾಲ್ವರು ಪತ್ರಕರ್ತರು ಬಲಿಯಾಗಿದ್ದಾರೆ.