ಕೊಳೆತುನಾರುವ ಶವದ ಜೊತೆ ನಾಲ್ಕು ದಿನ ವಾಸ

ಅಮ್ಮನ ಮೃತದೇಹದ ಜೊತೆ ಜೀವಿಸಿದ ಕೊಲ್ಕತ್ತಾದ ಮಹಿಳೆ

 | 
Representative Image

ಕೊಲ್ಕತ್ತಾ: ಮಹಿಳೆಯೊಬ್ಬರು ಕೊಳೆತು ನಾರುತ್ತಿದ್ದ 61 ವರ್ಷದ ಅಮ್ಮನ ಮೃತದೇಹದ ಜೊತೆ ನಾಲ್ಕು ದಿನ ಕಾಲ ಕಳೆದಿರುವ ಘಟನೆ ಕೊಲ್ಕತ್ತಾದ ತಂಗ್ರಾದಲ್ಲಿ ನಡೆದಿದೆ.

ಅಕ್ಕಪಕ್ಕದ ಜನರು ಪೊಲೀಸರಿಗೆ ತಿಳಿಸಿದ ನಂತರ ಪೊಲೀಸರು ಮನೆ ಬಾಗಿಲು ತೆರೆದು ಮನೆ ಪ್ರವೇಶಿಸಿದ ನಂತರ ಮಹಿಳೆ ಕೊಳೆತ ಶವದ ಜೊತೆ ಇದ್ದ ಈ ಘಟನೆ ಶನಿವಾರ ತಡವಾಗಿ ಬೆಳಕಿಗೆ ಬಂದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಮೃತಪಟ್ಟ ಮಹಿಳೆಯನ್ನು ಕೃಷ್ಣಾದಾಸ್ ಎಂದು ಪೊಲೀಸರು ಗುರುತಿಸಿದ್ದು, ಪೊಲೀಸರು ಮನೆಗೆ ತೆರಳಿದ ವೇಳೆ ಅವಿವಾಹಿತ ಮಹಿಳೆ ಮೃತದೇಹದ ಪಕ್ಕದಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದಳು. ಕೊಳೆತಿದ್ದ ಮೃತದೇಹದ ಸ್ಥಿತಿಗತಿ ಗಮನಿಸಿದಾಗ ಮೃತಪಟ್ಟಿದ್ದ ಕೃಷ್ಣಾದಾಸ್ ನಾಲ್ಕು ದಿನಗಳ ಹಿಂದೆ ಸತ್ತಿರಬಹುದು ಪ್ರಾಥಾಮಿಕ ವರದಿಯಿಂದ ತಿಳಿದುಬಂದಿದೆ.

ಈ ಸಾವು ಸ್ವಾಭಾವಿಕವೇ ಎಂದು ತಿಳಿಯಲು ತನಿಖೆ ಮುಂದುವರೆದಿದ್ದು, ಮೃತದೇಹವನ್ನು ಶವ ಪರೀಕ್ಷೆಗೆ ಕಳುಹಿಸಲಾಗಿದೆ.

ಮೃತ ಕೃಷ್ಣಾ ದಾಸ್ ಹಲವು ವರ್ಷಗಳಿಂದ ತನ್ನ ಮಗಳ ಜೊತೆ ತಂಗ್ರಾ ನಲ್ಲಿ ವಾಸವಾಗಿದ್ದರು, ಆದರೆ, ಅವರು ಮಗಳು ಅಮ್ಮನನ್ನು ಬಿಟ್ಟು ಅಕ್ಕಪಕ್ಕದವರ ಜೊತೆ ಸೇರುತ್ತಿರಲಿಲ್ಲ. ಮತ್ತು ಆಕೆ ಮನಸಿಕವಾಗಿ ಸರಿಯಿರಲಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.