ಆರೋಪ ಒಪ್ಪಿಕೊಂಡಾಯ್ತು ಮಾಜಿ ಸಚಿವರ ಬಂಧನ ಯಾವಾಗ: ಕಾಂಗ್ರೆಸ್ ಪ್ರಶ್ನೆ

 | 
Ramesh jarakiholi

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಿಕಿಹೊಳಿ ಆ ಸಿಡಿಯಲ್ಲಿರುವ ವ್ಯಕ್ತಿ ನಾನೆ ಎಂದು ಒಪ್ಪಿಕೊಂಡಿದ್ದಾರೆ. ರಮೇಶ್ ಜಾರಿಕಿಹೊಳಿ ಆರೋಪವನ್ನು ಒಪ್ಪಿಕೊಂಡ ಹಿನ್ನೆಲೆ ಕೆಪಿಸಿಸಿ ರಾಜ್ಯ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಆ ಸಿಡಿಯಲ್ಲಿ ಇರುವ ವ್ಯಕ್ತಿ ನಾನೇ ಎಂದು ರಮೇಶ್ ಜಾರಿಕಿಹೊಳಿ ಒಪ್ಪಿಕೊಂಡಿದ್ದಾರೆ. ಅವರ ಬಂಧನ ಯಾವಾಗ ಎಂದು ಕೆಪಿಸಿಸಿ ಟ್ವಿಟ್ಟರ್ ಮೂಲಕ ಪ್ರಶ್ನಿಸಿದೆ.

ನಾನವನಲ್ಲ ಎಂದವರು ಈಗ ‘ನಾನೇ ಅವನು’ ಎನ್ನುತ್ತಿದ್ದಾರೆ! ರಮೇಶ್ ಕಾರಕಿಹೊಳಿ ಅವರೇ ಸಿಡಿ ಅಸಲಿ, ಅದು ತಾವೇ ಎಂದ ಮೇಲೆ ಮೊದಲು ನಿರಾಕರಿಸಿದ್ದೇಕೆ ಎಸ್ಐಟಿ ರಚನೆ ಮಾಡಿಸಿದ್ದೇಕೆ ಜನರ ಹಣ ಪೋಲು ಮಾಡಿಸಿದ್ದೇಕೆ? ಎಂದು ಕೆಪಿಪಿಸಿ ಟ್ವೀಟ್ ಮಾಡಿದೆ.

ಅಲ್ಲದೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ. ಆರೋಪಿ ಒಪ್ಪಿಕೊಂಡಿದ್ದಾಯ್ತು, ಇನ್ನಾದರೂ ಸಂತ್ರಸ್ತೆಯ ದೂರಿನ ಮೆರೆಗೆ ಕಾನೂನು ಪಾಲಿಸುವಿರಾ? ಎಂದ ಗೃಹ ಸಚಿವರನ್ನು ಪ್ರಶ್ನಿಸಿದೆ.