ಕರ್ನಾಟಕ ಕೆಎಸ್ಆರ್‌ಟಿಸಿ ಪದ ಬಳಸುವಂತಿಲ್ಲ!

ಕೇರಳ ಮಾತ್ರ ಕೆಎಸ್ಆರ್‌ಟಿಸಿ ಪದ ಬಳಕೆ ಮಾಡುವಂತೆ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ತೀರ್ಪು

 | 
KSRTC

ಬೆಂಗಳೂರು: ಕರ್ನಾಟಕ ಮತ್ತು ಕೇರಳ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳೆರಡು ‘ಕೆಎಸ್ಆರ್‌ಟಿಸಿ’ ಎಂಬ ಹೆಸರನ್ನು ಬಳಸಿಕೊಳ್ಳುತ್ತಿದ್ದವು ಆದರೆ ಇನ್ನು ಮುಂದೆ ಕರ್ನಾಟಕ ಕೆಎಸ್ಆರ್‌ಟಿಸಿ ಎಂಬುದನ್ನು ಬಳಸುವಂತಿಲ್ಲ.

ಕರ್ನಾಟಕ ಮತ್ತು ಕೇರಳ ನಡುವೆ ಕೆಎಸ್ಆರ್‌ಟಿಸಿ ಪದ ಬಳಕೆಗೆ ಸಂಬಂಧಿಸಿದಂತೆ 2104ರಿಂದಲೂ ಕಾನೂನು ಸಮರ ನಡೆಯುತ್ತಿತ್ತು. ಆದ್ರೆ ಈಗ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಸಂಸ್ಥೆಯ ಟ್ರೇಡ್ ಮಾರ್ಕ್ ಕಾಯ್ದೆ 1999ರ ಅನ್ವಯ ಕೆಎಸ್ಆರ್‌ಟಿಸಿ ಪದ ಬಳಕೆಯನ್ನು ಕೇರಳ ಮಾತ್ರ ಮಾಡಬೇಕು ಎಂದು ಟ್ರೇಡ್ ಮಾರ್ಕ್ ರಿಜಿಸ್ಟ್ರಿ ತೀರ್ಪು ನೀಡಿದೆ. 

ಕೆಎಸ್ಆರ್‌ಟಿಸಿ ಹೆಸರನ್ನು ಬಳಸದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನೋಟಿಸ್ ನೀಡಲಾಗುವುದು ಎಂದು ಕೇರಳ ಸಾರಿಗೆ ನಿಗಮದ ಅಧ್ಯಕ್ಷ ಬಿಜು ಪ್ರಭಾಕರ್ ಹೇಳಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕಾನೂನು ಸಲೆಹ ಪಡೆದು ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದೆ.