ಸ್ಥಿತಿಗತಿ ನೋಡಿಕೊಂಡು ಜೂನ್ 5 ರಂದು ಲಾಕ್ ಡೌನ್ ವಿಸ್ತರಣೆ: ಸಿಎಂ ಯಡಿಯೂರಪ್ಪ
ರಾಜ್ಯದ ಜನ ಸಹಕರಿಸಿದರೆ ಲಾಕ್ ಡೌನ್ ಮುಂದುವರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ನೋಡಿಕೊಂಡು ಜೂನ್ 5 ರಂದು ಲಾಕ್ ಡೌನ್ ವಿಸ್ತರಣೆ ಮಾಡಬೇಕೋ, ಬೇಡವೋ ಎಂದು ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ಈಗಿರುವ ಲಾಕ್ ಡೌನ್ ಜೂನ್ 7ರ ವರೆಗೆ ಕಟ್ಟುನಿಟ್ಟಾಗೆ ಇರಲಿದೆ. ರಾಜ್ಯದ ಜನ ಸಹಕರಿಸಿದರೆ ಲಾಕ್ ಡೌನ್ ಮುಂದುವರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಂತರ ರಾಜ್ಯದ ಪರಿಸ್ಥತಿ ನೋಡಿಕೊಂಡು ಲಾಕ್ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಪಿಎಂ ಕೇರ್ಸ್ ವೆಂಟಿಲೇಟರ್ನಲ್ಲಿ ಕೆಲವೊಂದು ಸಮಸ್ಯೆಗಳು ಕಂಡುಬಂದಿವೆ. ಸಮಸ್ಯೆ ಸರಿಪಡಿಸುವ ಕೆಲಸ ನಡೆಯುತ್ತಿದೆ. ಆದಷ್ಟು ಬೇಗ ಸಮಸ್ಯೆ ಸರಿಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ರಾಜ್ಯದ ಕೋವಿಡ್ ಪರಿಸ್ಥತಿಯ ಕುರಿತು ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆ ಕಂಡಿದೆ. ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆ ನಡೆಸಿ ಗ್ರಾಮೀಣ ಪ್ರದೇಶಗಳಿಗೆ ವೈದ್ಯಕೀಯ ಸೌಲಭ್ಯ ಹೆಚ್ಚಿಸಲು ‘ವೈದ್ಯರ ನಡೆ ಹಳ್ಳಿ ಕಡೆಗೆ’ ಕಾರ್ಯಕ್ರಮಕ್ಕೆ ಒತ್ತು ನೀಡುವ ಬಗ್ಗೆ ತಿಳಿಸಿದರು.
ಹಾಗೆ ಬ್ಲಾಕ್ ಫಂಗಸ್ ಬಗ್ಗೆ ಚರ್ಚಿಸಿದ ಅವರು, ಬ್ಲಾಕ್ ಫಂಗಸ್ ಚಿಕಿತ್ಸೆಗೆ ಔಷಧದ ಕೊರತೆ ಇದೆ. ಈ ಹಿನ್ನೆಲೆ ಆದಷ್ಟು ಬೇಗ ಎಲ್ಲಿ ಔಷಧ ದೊರೆತರೂ ಆದಷ್ಟು ಬೇಗ ಔಷಧ ಖರೀದಿ ಮಾಡುವಂತೆ ಸೂಚಿಸಿದರು.