ದೆಹಲಿಯಲ್ಲಿ ಲಾಕ್ ಡೌನ್ ಯಶಸ್ವಿ, ಕೋವಿಡ್ ಪ್ರಕರಣಗಳಲ್ಲಿ ಇಳಿಕೆ

ಐಸಿಯು ಮತ್ತು ಆಕ್ಸಿಜನ್ ಬೆಡ್ಗಳ ಸಮಸ್ಯೆ ಸಧ್ಯಕ್ಕಿಲ್ಲ: ದೆಹಲಿ ಸಿಎಂ ಕೇಜ್ರಿವಾಲ್

 | 

ನವದೆಹಲಿ: ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದ್ದು, ನಿಮ್ಮೆಲ್ಲರ ಸಹಕಾರದಿಂದ ಲಾಕ್ ಡೌನ್ ಯಶಸ್ವಿಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕಳೆದೆರಡು ದಿನಗಳಿಂದ ನಾವು ಆಕ್ಸಿಜನ್ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ನಿನ್ನೆ ಜಿಟಿಬಿ ಆಸ್ಪಿಟಲ್ ನಲ್ಲಿ 500 ಐಸಿಯು ಹೊಸ ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಸಧ್ಯಕ್ಕೆ ದೆಹಲಿಯಲ್ಲಿ ಐಸಿಯು ಮತ್ತು ಆಕ್ಸಿಜನ್ ಬೆಡ್ಗಳ ಸಮಸ್ಯೆ ಇಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ನಂತರ ಮಾತನಾಡಿರುವ ಅವರು ದೇಶದಲ್ಲಿ ಕೇವಲ ರಡು ಕಂಪನಿಗಳು ಮಾತ್ರ ವ್ಯಾಕ್ಸಿನ್ ತಯಾರಿಸುತ್ತಿದ್ದು, ಒಂದು ತಿಂಗಳಿಗೆ 6ರಿಂದ 7 ಕೋಟಿ ವ್ಯಾಕ್ಸಿನ್ ಗಳನ್ನು ಉತ್ಪಾದಿಸುತ್ತಿವೆ. ಇದರಿಂದ ಭಾರತದ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಮಾಡಲು ಎರಡು ವರ್ಷ ಬೇಕಾಗುತ್ತದೆ ಈ ಸಂದರ್ಭದಲ್ಲಿ ಹಲವು ಕೋವಿಡ್ ಅಲೆಗಳು ಬಂದು ನಮ್ಮನ್ನು ಬಾಧಿಸಬಹುದು ಆದ್ದರಿಂದ ವ್ಯಾಕ್ಸಿನ್ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರೆ.