ಭೂವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಬಡಿದು ಸಾಯಿಸಿದ ದುಷ್ಟರು
ಮಧ್ಯಪ್ರದೇಶದ ಜ್ಜೈನಿಯಲ್ಲಿ ಘಟನೆ, ಭಯಾನಕ ದೃಶ್ಯ ಮೊಬೈಲ್ ನಲ್ಲಿ ಸೆರೆ

ಉಜ್ಜೈನಿ, ಮಧ್ಯಪ್ರದೇಶ: ಭೂ ವಿವಾದಕ್ಕೆ ಸಂಬಂಧಿಸಿದಂತೆ 26 ವರ್ಷದ ಪುರುಷನನ್ನು ಐವರು ದುಷ್ಕರ್ಮಿಗಳು ಬಡಿಗೆಯಿಂದ ಬಡಿದು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಗೋವಿಂದ ಎನ್ನುವವರನ್ನು ಐದು ಜನ ಕೊಲೆಗಡುಕರು ಕೋಲಿನಿಂದ ಪಜ್ಞೆತಪ್ಪುವವರೆಗೆ ಮನಬಂದಂತೆ ಥಳಿಸಿ, ಒಡೆದು ಬಡಿದಿದ್ದಾರೆ. ಆನಂತರ, ಬೈಕ್ ನಲ್ಲಿ ಅವರ ಮನೆ ಎದುರುಗಡೆ ತಂದು ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಈ ಸಂಬಂಧ ಐವರನ್ನು ಬಂಧಿಸಲಾಗಿದ್ದು, ಇನ್ನು ಹೆಚ್ಚು ಜನರ ಸಂಕಿತರಿಗಾಗಿ ಪೊಲೀಸರು ಬಲೆ ಬೀಸಿದ್ದರೆ.
ಈ ದೃಶ್ಯದಲ್ಲಿ ಗೋವಿಂದ ರಸ್ತೆಯಲ್ಲಿ ಅಲುಗಾಡದಂತೆ ಬಿದಿದ್ದಾನೆ. ಆದರೂ, ಮೂವರು ದುಷ್ಟರು ಮನಬಂದಂತೆ ಥಳಿಸುತ್ತಿದ್ದಾರೆ. ಓರ್ವ ವ್ಯಕ್ತಿ ಕೆಳಗೆ ಬಿದ್ದಿರುವ ವ್ಯಕ್ತಿಯ ತೋಳನ್ನು ಹಿಡಿದು ಮೆಲ್ಲಕ್ಕೆತ್ತಲು ಪ್ರಯತ್ನಿಸುತ್ತಿದ್ದಾನೆ.
ಗೋವಿಂದ ಮತ್ತು ಮತ್ತೋರ್ವ ವ್ಯಕ್ತಿ ನಡುವೆ ಹಲವು ದಿನಗಳಿಂದ ಭೂ ವಿವಾದ ಇತ್ತು. ಅಶುದಗರ್ ಎಂಬ ಆರೋಪಿ ಮತುಕತೆಗೆ ಕರೆದಿದ್ದ, ನಂತರ ಇತರರು ಅವನ ಜೊತೆ ಸೇರಿ ಗೋವಿಂದನಿಗೆ ಥಳಿಸಿದರು ಎಂದು ಗೋವಿಂದನ ಸ್ನೇಹಿತ ಸೂರಜ್ ಪೊಲೀಸರಿಗೆ ತಿಳಿಸಿದ್ದಾನೆ.
ಥಳಿತಕ್ಕೊಳಗಾದ ಗೋವಿಂದ ಬಲಹೀನಗೊಂಡ ನಂತರ ಓರ್ವ ವ್ಯಕ್ತಿ ಬೈಕ್ ನಲ್ಲಿ ತಂದು ಆತನ ಮನೆಯ ಎದರು ಬಿಸಾಕಿ ಹೋಗಿದ್ದಾನೆ. ಇದನ್ನು ನೋಡಿದ ಗೋವಿಂದನ ಮನೆಯವರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಗೋವಿಂದ ಸಾವನ್ನಪ್ಪಿದ್ದಾನೆ.