ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಸಿಕ್ಕಿಬಿದ್ದ ಭೂಪ
ಮ್ಯಾಟ್ರಿಮೋನಿ ಸೈಟ್ ಗಳ ಮೂಲಕ ಮಹಿಳೆಯರನ್ನು ಪುಸಲಾಯಿಸುತ್ತಿದ್ದ ಆರೋಪಿ

ಮುಂಬೈ: ಮಹಿಳೆಯರಿಗೆ ವಂಚಿಸಿ 12 ಮಹಿಳೆಯರ ಮೇಲೆ ಲೈಂಗಿಕ ದಬ್ಬಾಳಿಕೆ ನಡೆಸಿದ ಆರೋಪದ ಮೇಲೆ 32 ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ಓರ್ವನನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಮಲದ್ ನಲ್ಲಿ ಬಂಧಿಸಲಾಗಿರುವ ಆರೋಪಿಯನ್ನು ಮಹೇಶ್ ಅಲಿಯಾಸ್ ಕರಣ್ ಗುಪ್ತ ಎಂದು ಗುರುತಿಸಲಾಗಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ ಮ್ಯಾಟ್ರಿಮೋನಿ ಸೈಟ್ ಗಳಲ್ಲಿ ಹಲವು ನಖಲಿ ಪ್ರೊಫೈಲ್ ಗಳನ್ನು ಕ್ರಿಯೇಟ್ ಮಾಡಿ ವಿದ್ಯಾವಂತ ಮಹಿಳೆಯರಿಗೆ ಆಮಿಷ ಒಡ್ಡುತ್ತಿದ್ದ, ಅವರು ವೆಬ್ಸೈಟ್ ಗಳ ಮೂಲಕ ಸಂಪರ್ಕಕ್ಕೆ ಬಂದ ನಂತರ, ಪೋನ್ ಮೂಲಕ ಕಾಂಟ್ಯಾಕ್ಟ್ ಮಾಡಿ ಪಬ್, ರೆಸ್ಟೋರೆಂಟ್, ಮಾಲ್ ಗಳಲ್ಲಿ ಮೀಟ್ ಮಾಡುತ್ತಿದ್ದ.
ಮೀಟಿಂಗ್ ನಲ್ಲೆಯೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಡಿಸಿಪಿ ಸುರೇಶ್ ಮೆಂಗದೆ ಹೇಳಿದ್ದಾರೆ.
ಆರೋಪಿ ಎಲ್ಲಾ ಕೃತ್ಯಗಳಲ್ಲೂ ಬೇರೆ ಬೇರೆ ಮೊಬೈಲ್ ನಂಬರ್ ಗಳನ್ನು ಬಳಸುತ್ತಿದ್ದ, ಪ್ರತೀ ಬಾರಿಯೂ ಸಿಮ್ ಬದಲಿಸುತ್ತಿದ್ದ, ಓಲಾ ಮತ್ತು ಊಬರ್ ಟ್ಯಾಕ್ಸಿಗಳನ್ನು ಬುಕ್ ಮಾಡುವಾಗಲೂ ಆತ ಬೇರೆ ಬೇರೆ ಸಿಮ್ ಗಳನ್ನು ಬಳಸುತ್ತಿದ್ದ. ಅವನು ಬಳಸುತ್ತಿದ್ದ ನಂಬರ್ ಗಳು ಯಾವುವು ಅವನ ಹೆಸರಿನವಲ್ಲ. ಕಂಪ್ಯೂಟರ್ ಗಳ ಬಗ್ಗೆ ಹೆಚ್ಚು ಜ್ಞಾನ ಹೊಂದಿದ್ದ ಈತ ಹಲವು ದಿನಗಳ ಹಿಂದೆ ಹ್ಯಾಕರ್ ಆಗಿ ಕಾರ್ಯ ನಿರ್ವಹಿಸಿದ್ದಾನೆ ಎಂದು ಮೆಂಗದೆ ಹೇಳಿದ್ದಾರೆ.
ಆರೋಪಿ ಕರಣ್ ಗುಪ್ತ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಓದಿ ದೊಡ್ದ ದೊಡ್ದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾನೆ. ಇಲ್ಲಿವರೆಗೆ 12 ಜನ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದು, ಇನ್ನೂ ಹೆಚ್ಚು ಜನರನ್ನು ವಂಚಿಸಿರಬಹುದು ಎಂದು ಡಿಸಿಪಿ ಮೆಂಗದೆ ಹೇಳಿದ್ದಾರೆ.