ಮೆಕ್ಸಿಕೋದ ಅಂಡ್ರಿಯಾಗೆ ಮಿಸ್ ಯುನಿವರ್ಸ್ 2021ರ ಕಿರೀಟ

ಭಾರತದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೇಲಿನೋಗೆ 3ನೇ ರನ್ನರ್ ಅಫ್ ಸ್ಥಾನ

 | 
ಮೆಕ್ಸಿಕೋದ ಅಂಡ್ರಿಯಾಗೆ ಮಿಸ್ ಯುನಿವರ್ಸ್ 2021ರ ಕಿರೀಟ

ಫ್ಲೋರಿಡಾ: ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ವಿಶ್ವಸುಂದರಿ 2021ರ ಕಿರೀಟವನ್ನು ಅಂಡ್ರಿಯಾ ಮೆಜಾ ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಕೊರೋನಾ ಹಿನ್ನೆಲೆ 2020 ರ ಮಿಸ್ ಯೂನಿವರ್ಸ್ ಸ್ಪರ್ಧೆಯನ್ನು ರದ್ದುಗೊಳಿಸಲಾಗಿತ್ತು ನಂತರ ಭಾನುವಾರ ನಡೆದ ಮಿಸ್ ಯೂನಿವರ್ಸ್ 2021 ಅಂತಿಮ ಸುತ್ತಿನಲ್ಲಿ ಮೆಕ್ಸಿಕೋದಾ 26 ವರ್ಷದ ಅಂಡ್ರಿಯಾ ಮೆಜಾ 69ನೇ ವಿಶ್ವ ಸುಂದರಿಯಾಗಿ ಕಿರೀಟ ಧರಿಸಿಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ಬ್ರೆಝಿಲ್ ನ ಜೂಲಿಯಾ ಗಾಮ ರನ್ನರ್ ಆಫ್ ಆದರೆ, ಪೆರುವಿನ ಮಾಸೆಟಾ ಅವರು ಎರಡನೇ ರನ್ನರ್ ಅಫ್ ಆಗಿ ಸ್ಥಾನ ಪಡೆದಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ 22 ವರ್ಷದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೇಲಿನೋ ಅವರು ಮೂರನೇ ರನ್ನರ್ ಅಫ್ ಆಗಿ ಆಯ್ಕಯಾಗಿದ್ದಾರೆ.