ಸೋಂಕಿತ ಮೃತ ದೇಹಗಳಿಗೆ ಮುಕ್ತಿ ನೀಡುತ್ತಿರುವ ಮುಸ್ಲಿಂ ಯುವಕರು

ಪ್ರಾಣದ ಹಂಗು ತೊರೆದು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು

 | 
ಸೋಂಕಿತ ಮೃತ ದೇಹಗಳಿಗೆ ಮುಕ್ತಿ ನೀಡುತ್ತಿರುವ ಮುಸ್ಲಿಂ ಯುವಕರು

ಬೆಳಗಾವಿ: ಹುಕ್ಕೇರಿ ನಗರದ ಮುಸ್ಲಿಂ ಯುವಕರು ಸೋಂಕಿತ ಮೃತ ದೇಹಗಳಿಗೆ ಜ್ಯಾತ್ಯಾತೀತವಾಗಿ ಮುಕ್ತಿ ನೀಡುವ ಕಾರ್ಯ ಎಲೆಮರೆ ಕಾಯಿಯಂತೆ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ಎರಡನೇ ಅಲೆ ತಿವೃಗತಿಯಲ್ಲಿ ಹರಡುತ್ತಿದ್ದು ,ಕೊರೊನಾ ಸೋಂಕಿನಿಂದ ಮೃತಪಟ್ಟ ಎಲ್ಲ ಜಾತಿಯ ಜನಾಂಗದವರ ಶವ ಸಂಸ್ಕಾರವನ್ನು ಹುಕ್ಕೇರಿ ಮುಸ್ಲಿಂ ಸಮಾಜದ ಯುವಕರ ತಂಡ ಅಚ್ಚುಕಟ್ಟಾಗಿ ನೇರವೆರಿಸುವದರ ಮೂಲಕ ಬೆಳಗಾವಿ ಜಿಲ್ಲೆಗೆ ಮಾದರಿಯಾಗಿದ್ದಾರೆ.

ಕಳೆದ ವರ್ಷ ಕೊರೊನಾ ಸಂಕಷ್ಟದಲ್ಲಿ ಆರಂಭಿಸಿದ ಸೇವಯನ್ನು ಮುಂದುವರೆಸಿಕೊಂಡು ಬರುತ್ತಿರುವ ಮುಸ್ಲಿಂ ಯುವಕರ ತಂಡ ಪ್ರಾಣದ ಹಂಗು ತೊರೆದು ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ಧಾವಿಸುತ್ತಿದ್ದಾರೆ.

ಈ ಕುರಿತು ಮಾತನಾಡಿದ ಶಿಕ್ಷಕಿ ಮಂಜುಳಾ ಅಡಿಕೆ ಕೊರೊನಾ ಸಂದಿಗ್ದ ಪರಿಸ್ಥಿತಿಯಲ್ಲಿ ಹುಕ್ಕೇರಿ ನಗರದ ಮುಸ್ಲಿಂ ಯುವಕರು ಸೋಂಕಿತರ ಶವಗಳಿಗೆ ಮುಕ್ತಿ ನೀಡುವ ಕಾಯಕವನ್ನು ಸದ್ದಿಲ್ಲದೆ ಮತ್ತು ಯಾವುದೆ ಪ್ರಚಾರವಿಲ್ಲದೆ ನಡೆಸಿಕೊಂಡು ಬರುತ್ತಿದ್ದಾರೆ ಅವರಿಗೆ ಎಲ್ಲಾ ಸಮಾಜದ ವತಿಯಿಂದ ಕೋಟಿ ಕೋಟಿ ನಮನಗಳನ್ನು ಸಲ್ಲಿಸುತ್ತೆನೆ ಎಂದರು.

ಕೊರೊನಾದಿಂದ ಮೃತಪಟ್ಟರೆ ಕುಟುಂಬಸ್ಥರು, ಬಂಧು ಮಿತ್ರರು ಶವ ಮುಟ್ಟಲು ಮುಂದೆ ಬರುತ್ತಿಲ್ಲಾ, ಇದು ಅತ್ಯಂತ ಅಮಾನವಿಯ ,ಇದರಿಂದ ಈ ಮುಸ್ಲಿಂ ಯುವಕರ ತಂಡ ಶವ ಸಂಸ್ಕಾರ ಮಾಡಲು ದೃಢ ನಿರ್ಧಾರ ಕೈಕೊಂಡಿದ್ದಾರೆ, ಮೃತ ವ್ಯಕ್ತಿಯ ಜಾತಿ, ಧರ್ಮ ಯಾವುದನ್ನೂ ಲೆಕ್ಕಿಸದೇ ಅವರವರ ಧರ್ಮಗಳ ಸಂಪ್ರದಾಯಗಳ ಪ್ರಕಾರ ಶವ ಸಂಸ್ಕಾರ ಮಾಡುತ್ತಿದ್ದಾರೆ. ಕಡು ಬಡವರ ಶವಸಂಸ್ಕಾರವನ್ನು ಉಚಿತವಾಗಿ ನೇರವೆರಿಸಿದರೆ ಆರ್ಥಿಕ ಶಕ್ತಿ ಇದ್ದು ಕೊರೊನಾ ಭಯದಿಂದ ಅಂತಿಮ ಸಂಸ್ಕಾರಕ್ಕೆ ಮುಂದೆ ಬಾರದವರಿಂದ ಪಿ ಪಿ ಇ ಕೀಟ್, ಕಟ್ಟಿಗೆ ಮೊದಲಾದ ವೆಚ್ಚಕ್ಕೆ ಹಣ ಪಡೆಯಲಾಗುತ್ತಿದೆ.

ಈ ತಂಡಕ್ಕೆ ಸರ್ಕಾರದಿಂದ ಪಿ ಪಿ ಇ ಕೀಟ್, ಮಾಸ್ಕ್, ಹ್ಯಾಂಡ್ ಗ್ಲೌಸ್ ಸ್ಯಾನಿಟರಿಸ್ ನೀಡುತ್ತಿಲ್ಲಾ, ಕೇವಲ ಪುರಸಭೆ ವತಿಯಿಂದ ಶವಸಾಗಾಟಕ್ಕೆ ಮುಕ್ತಿ ವಾಹನ ಮಾತ್ರ ಉಚಿತವಾಗಿ ಲಭ್ಯವಾಗುತ್ತಿದೆ .

ಇದೆ ರೀತಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಗೋಕಾಕ, ರಾಯಭಾಗ, ಬೆಳಗಾವಿ ನಗರ ಸೇರಿದಂತೆ ವಿವಿಧ ನಗರಗಳಲ್ಲಿ ಕೋಮಸೌಹಾರ್ದತೆಗೆ ಮಾದರಿಯಾಗಿದ್ದಾರೆ ಎಂಬುವದು ಈ ಮುಸ್ಲಿಂ ಯುವಕರು ಕೊರೊನಾ ಸಂದರ್ಭದಲ್ಲಿ ಜಾತಿ ಮತ ಭೇದವಿಲ್ಲದೆ ಎಲೆಮರೆ ಕಾಯಿಯಂತೆ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ. ಇವರೆಲ್ಲರಿಗೋ ಒಂದು ಸಲಾಂ ಹೇಳಲೇಬೇಕು.