ನನ್ನ ತಂದೆ ನಿನ್ನಲ್ಲಿ ಅರೇಬಿಕ್ ರಕ್ತವಿದೆ ಎನ್ನುತ್ತಿದ್ದರು: ಮುಖೇಶ್ ಅಂಬಾನಿ

ಕತಾರ್ ನ ಎಕನಾಮಿಕ್ ಫೋರಂನಲ್ಲಿ ಅರಬ್ ಸಂಬಂಧ ನೆನೆದ ಅಂಬಾನಿ

 | 
Mukesh ambani

ನವದೆಹಲಿ: ನಾನು ಯೆಮೆನ್ ನಲ್ಲಿ ಜನಿಸಿದವನು. ನನ್ನ ತಂದೆ ನನ್ನಲ್ಲಿ ಅರೇಬಿಕ್ ರಕ್ತವಿದೆ ಎಂದು ನನ್ನ ತಂದೆ ಹೇಳುತ್ತಿದ್ದರು ಎಂದು ಏಷ್ಯಾದ ಶ್ರೀಮಂತ ವ್ಯಕ್ತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ನ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ.

ಕತಾರ್ ನಲ್ಲಿ ನಡೆದ ಎಕನಾಮಿಕ್ ಫೋರಂನಲ್ಲಿ ಮಾತನಾಡಿದ ಅವರು, ನಾನು ಯೆಮನ್ ದೇಶದಲ್ಲಿ ಹುಟ್ಟುದೆ. ಏಕೆಂದರೆ, ಯುವಕನಾಗಿದ್ದಾಗ ನನ್ನ ತಂದೆ ಯೆಮೆನ್ ಗೆ ಆಗಮಿಸಿದ್ದರು. ಅವರು ಯಾವಾಗಲೂ ನಿನ್ನಲ್ಲಿ ಅರೇಬಿಕ್ ರಕ್ತವಿದೆ ಎಂದು ಹೇಳುತ್ತಿದ್ದರು ಎಂದು ತಿಳಿಸಿದ್ದಾರೆ.

ಭಾರತ ಮತ್ತು ಅರೇಬಿಕ್ ದೇಶಗಳ ಸಂಬಂಧಗಳ ಬಗ್ಗೆ ಮಾತನಾಡಿರುವ ಅವರು, ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವಿನ ಸಂಬಂಧಗಳ ಮಹತ್ವ ನನಗೆ ತಿಳಿದಿದೆ. ಇದು ಶತಮಾನಗಳ ಸಂಬಂಧ, ಕತಾರ್ ನಲ್ಲಿ ಹೆಚ್ಚು ಭಾರತೀಯರು ಇದ್ದಾರೆ ಎಂದು ತಿಳಿದಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಸ್ವಂತ ಕುಟುಂಬದಲ್ಲೇ ಶೇಖಾ ಮೋಝಾ ಅವರೊಡನೆ ಕೆಲಸ ಮಾಡುವ ಅವಕಾಶ ನನ್ನದಾಗಿತ್ತು. ನನ್ನ ಪತ್ನಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸಾಧನೆಯ ಅಭಿಮಾನಿ, ಕತಾರ್ ರಾಜಕುಟುಂಬದಿಂದ ನಾವು ಕಲಿಯುವ ಮೂಲಕ, ಪ್ರೇರಣ ಪಡೆದು ಭಾರತ ಹಾಗೂ ಕತಾರ್ ನಡುವೆ ಗಾಢ ಸಂಬಂಧ ಬೆಳೆಸಬಹುದು ಎಂದು ಅಂಬಾನಿ ತಿಳಿಸಿದ್ದಾರೆ.