ಗಂಗಾ ನದಿಯಲ್ಲಿ ತೇಲಿ ಬಂದ ನವಜಾತ ಶಿಶು
ಮಗುವನನ್ನು ರಕ್ಷಿಸಿದ ಮೀನುಗಾರ

ಘಾಝಿಪುರ್: ನವಜಾತ ಶಿಶುವೊಂದು ಗಂಗಾ ನದಿಯಲ್ಲಿ ತೇಲಿ ಬಂದಿದೆ. ಮರದ ಡಬ್ಬಿಯಲ್ಲಿ ತೇಲಿ ಬಿಡಲಾಗಿದ್ದ ಹೆಣ್ಣು ಮಗುವು, ಘಾಝಿಪುರದ ದಾದ್ರಿ ಘಾಟ್ ನ ಗಂಗಾ ನದಿಯ ಅಂಬಿಗನ ಕೈಗೆ ಸಿಕ್ಕಿದೆ.
ಗುಲ್ಲು ಚೌಧರಿ ಎಂಬ ಮೀನುಗಾರ ನದಿಯಲ್ಲಿ ತೇಲಿ ಬಂದ ಹೇಣ್ಣು ಮಗುವನ್ನು ರಕ್ಷಿಸಿದ್ದು, ಇದನ್ನು ಎತ್ತುಕೊಂಡ ಅಂಬಿಗನಾದ ಗುಲ್ಲು ಚೌಧರಿ ಇದು ಗಂಗಾ ನದಿಯ ಕೊಡುಗೆ ಎಂದು ಹೇಳಿದ್ದಾನೆ. ಮಗುವನ್ನು ತೇಲಿ ಬಿಡಲಾಗಿರುವ ಮರದ ಡಬ್ಬದಲ್ಲಿ ದೇವರು ಮತ್ತು ದೇವತೆಗಳ ಪಟಗಳು ಇವೆ. ಹಾಗೆ ಮಕ್ಕಳ ಜಾತಕವೂ ಇದೆ ಎಂದು ತಿಳಿಸಿದ್ದಾನೆ.
ವಿಷಯ ತಿಳಿದ ಪೊಲೀಸರು, ಮಗುವನ್ನು ಪಡೆದು ಸ್ಥಳಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಮಗುವಿಗೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗಿದೆ ಹಾಗೆ ಮಗುವುನ ನಿಜವಾದ ಪೋಷಕರಿಗಾಗಿ ಹುಡುಕಾಟ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಂಬಿಗನ ಕೆಲಸವನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಗಳಿದ್ದು, ಮಗುವಿನ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಯನ್ನು ಸರ್ಕಾರವೇ ಕಲ್ಪಿಸಲಿದೆ ಎಂದು ಹೇಳಿದ್ದಾರೆ.