ಕೊರೋನಾ ರೋಗಿಗಳಿಗೆ ಹಸು ಕಟ್ಟುವ ಜಾಗದಲ್ಲೇ ಚಿಕಿತ್ಸೆ

ಮರದ ಕೊಂಬೆಯೇ ಗ್ಲೂಕೋಸ್ ಬಾಟಲ್ ಗೆ ಆಸರೆ

 | 
ಕೊರೋನಾ ರೋಗಿಗಳಿಗೆ ಹಸು ಕಟ್ಟುವ ಜಾಗದಲ್ಲೇ ಚಿಕಿತ್ಸೆ

ಮೆವ್ಲಾ, ಗೋಪಾಲ್ಘಡ್: ರೋಗಿಗಳಿಗೆ ಹಸುಗಳನ್ನು ಕಟ್ಟುವ ಜಾಗದ ಮರದ ಕೆಳಗಿನ ಕಾಟ್ ಗಳಲ್ಲೇ ಮಲಗಿಸಿ ಚಿಕಿತ್ಸೆ, ಗ್ಲೂಕೋಸ್ ಬಾಟಲ್ ಗಳನ್ನು ಮರದ ಕೊಂಬೆಗೆ ನೇತುಹಾಕಲಾಗದೆ, ಔಷಧಿ ಮತ್ತು ಸಿರೀಜ್ ಗಳನ್ನು ನೆಲದ ಮೇಲೆ ಇಡಲಾಗಿದೆ ಇದು ಉತ್ತರಪ್ರದೇಶದ ಗ್ರಾಮವೊಂದಕ್ಕೆ ಕೋರೋನಾ ಒಕ್ಕರಿಸಿದ್ದರಿಂದ ಕೊರೋನಾಗೆ ತುತ್ತಾದವರಿಗೆ ಚಿಕಿತ್ಸೆ ನಿಡುತ್ತಿರುವ ವಿಧಾನ.

ರಾಷ್ಟದ ರಾಜಧಾನಿ ದಹಲಿಯಿಂದ ಕೇವಲ 90ಕಿಲೋಮೀಟರ್ ದೂರವಷ್ಟೇ ಇರುವ ಮೇವ್ಲಾದ ಗೋಪಾಲ್ಘಡದಲ್ಲಿ ಸರಿಯಾದ ವೈದ್ಯರು ಮತ್ತು ಆಸ್ಪತ್ರೆಯ ವ್ವವಸ್ಥೆ ಇಲ್ಲ, ಹತ್ತಿರದಲ್ಲೇ ಸರ್ಕಾರಿ ಆಸ್ಪತ್ರೆ ಇದ್ದರೂ ಬೆಡ್ ಗಳ ವ್ಯವಸ್ಥೆ ಇಲ್ಲವೇ ಇಲ್ಲ. ಪ್ರೈವೇಟ್ ಕ್ಲಿನಿಕ್ ಗಳಿದ್ದರೂ ಅವುಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ನಮ್ಮತ್ರ ಹಣವಿಲ್ಲ ಎಂಬುದು ಇಲ್ಲಿನ ಜನರ ಆಂಬೋಣ.

ಆದ್ದರಿಂದ, ಗ್ರಾಮದ ವೈದ್ಯರು ಓಪನ್ ಏರ್ ಕ್ಲೀನಿಕ್ ಸ್ಥಾಪಿಸಿ ಪರ್ಯಾಯ ಔಷಧ ನೀಡುತ್ತಿದ್ದಾರೆ. ಕೋವಿಡ್ ಲಕ್ಷಣವಿರುವ ರೋಗಿಗಳಿಗೆ ಗ್ಲೂಕೋಸ್ ಮತ್ತು ಇತರೆ ಪರಿಹಾರಗಳನ್ನು ಮರದ ಕೆಳಗೆ ನೀಡಲಾಗುತ್ತಿದೆ.

ಬೇವಿನ ಮರ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಅದರ ಕೆಳಗೆ ಮಲಗಿದರೆ ಆಕ್ಸಿಜನ್ ಮಟ್ಟ ಹೆಚ್ಚಾಗಲಿದೆ ಎಂಬುದು ಕೆಲವರ ನಂಬಿಕೆ. ಆದರೆ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಜನರಿಗೆ ಏನಾದರೂ ಉಸಿರಾಟದ ತೊಂದರೆ ಕಂಡರೆ ತಮ್ಮ ಆಕ್ಸಿಜನ್ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಮರದ ಕೆಳಗೆ ಹೋಗುತ್ತಾರೆ ಎಂದು ಸಂಜಯ್ ಸಿಂಗ್ ಎಂಬುವವರು ಹೇಳಿದ್ದಾರೆ. ಇವರ 74 ವರ್ಷದ ತಂದೆ ಕೆಲದಿನಗಳ ಹಿಂದೆ ಜ್ವರ ಉಲ್ಬಣಗೊಂಡು ತಿರಿಹೋದರಂತೆ, ಅವರಿಗೆ ಯಾವುದೇ ರೀತಿಯ ಪರೀಕ್ಷೆಯನ್ನು ಮಾಡಸಿಲ್ಲ, ಜನ ಸಾಯುತ್ತಲೇ ಇದ್ದಾರೆ ಆದರೆ ನಮ್ಮ ಕಡೆ ಯಾರೂ ನೋಡುತ್ತಿಲ್ಲ ಎಂದು ಸಿಂಗ್ ಹೇಳಿದ್ದಾರೆ.

ಕೋವಿಡ್ ಎರಡನೇ ಅಲೆ ವಿನಾಶಕಾರಿಯಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ಟೀಕೆಗೊಳಗಾಗಿದ್ದಾರೆ. ಕಳೆದ ವಾರ ಅವರು ಗ್ರಾಮಗಳಲ್ಲಿ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ ಎಂದು ಮೋದಿ ಭಾಷಣದಲ್ಲಿ ತಿಳಿಸಿ ಯಾರೂ ಸಹ ಕೋವಿಡ್ ರೋಗದ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದಂತೆ ತಿಳಿಸಿದ್ರು, ಪರೀಕ್ಷೆ ಮಾಡಿಸಿಕೊಳ್ಳಿ, ನೀವೇ ಪ್ರತ್ಯೇಕವಾಗಿರಿ ಮತ್ತು ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಿರಿ ಎಂದು ಹೇಳಿದ್ದರು.

ಆದರೆ, ಈ ಗ್ರಮದ ಜನರು ಅವರಿಗೆ ಒಳ್ಳೆಯದ್ದು ಅನ್ನಿಸಿದ್ದನ್ನು ಅವರು ಮಾಡುತ್ತಿದ್ದಾರೆ. ಓರ್ವ ಮಹಿಳೆ ನೆರೆ ಊರಿನಿಂದ ಆಕ್ಸಿಜನ ಸಿಲೀಂಡರ್ ತೆಗೆದುಕೊಂಡು ಬಂದಿದ್ರು ಈಗ ಅವರ ಪರಿಸ್ಥಿತಿ ಸುಧಾರಿಸಿದೆ ಎಂದು ಅವರು ಕುಟುಂಬ ತಿಳಿಸಿದೆ.

ಸತ್ಯ ಏನಂದರೆ, ಇಲ್ಲಿ ಯಾವುದೇ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ. ನಾವು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಪ್ರಯತ್ನ ಮಾಡಿದೆವು ಆದರೆ ನಮ್ಮಲ್ಲಿ ಸಾಕಷ್ಟು ಅಧಿಕಾರಿಗಳು ಇಲ್ಲವೆಂದು ಎಂದು 48 ವರ್ಷದ ಯೊಗೇಶ್ ತಲಾನ್ ಹೇಳಿದ್ದಾರೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.