ಸಾಲ ತೀರಿಸಲು ಮಗಳನ್ನೇ ಮಾರಾಟ ಮಾಡಿದ ಅಪ್ಪ

ಮಗುವನ್ನು ರಕ್ಷಿಸಿದ ನಂತರ ದೂರು ದಾಖಲಿಸಿದ ಮಗುವಿನ ತಾತ

 | 
rescued child

ಐದು ಸಾವಿರ ರೂಪಾಯಿ ಸಾಲದಿಂದ ತಪ್ಪಿಸಿಕೊಳ್ಳಲು ಎರಡೂವರೆ ವರ್ಷದ ಅಪ್ರಾಪ್ತ ಮಗಳನ್ನು ತಂದೆಯೋರ್ವ ಮಾರಾಟ ಮಾಡಿರುವ ಘಟನೆ ಒಡಿಸ್ಸಾ ರಾಜ್ಯದ ಜಾಜ್ ಪುರ ಜಿಲ್ಲೆಯಲ್ಲಿ ನಡೆದಿದೆ.

ಈ ಸಂಬಂಧ ಮಗುವಿನ ತಾತ ರಬಿಂದ್ರ ಬಾರಿಕ್ ತನ್ನ ಮಗ ರಮೇಶ್ ಮತ್ತು ಬಾಕಿ ಹಣಕ್ಕಾಗಿ ಮಗುವನ್ನು ಪಡೆದಿರುವ ಲಿತು ಜೇನಾ ಎಂಬ ಇಬ್ಬರ ಮೇಲೆ ಪ್ರಕರಣ ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ರಕ್ಷಿಸಿದ್ದಾರೆ.

ಮಗುವಿನ ತಂದೆ ರಮೇಶ್ ಕುಮಾರ್ ಬಾರಿಕ್ ಬಿನ್ ಜರ್ ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಶಹದೇವ್ ಪುರ ಗ್ರಾಮದ ಲಿತು ಜೇನಾ ಎಂಬುವವರು ಐದು ಸಾವಿರ ರೂಪಾಯಿಗಳನ್ನು ಸಾಲ ಮಾಡಿದ್ದ, ಹಣಕಾಸಿನ ತೊಂದರೆ ಬಿಡಲಾಯಿಸಿದ ನಂತರ ಲಿತು ಜೇನಾಗೆ ಸರಿಯಾದ ಸಮಯಕ್ಕೆ ಹಣ ಪಾವತಿಸಲು ತೊಂದರೆಯಾಗಿತ್ತು. ಆದ್ದರಿಂದ ಲಿತು ಜೇನಾ ಹಣ ವಾಪಾಸ್ ನೀಡುವಂತೆ ನಿರಂತರವಾಗಿ ರಮೇಶ್ ಮನೆಗ ಬರುತ್ತಿದ್ದ, ಈ ಸಂದರ್ಭ ತನ್ನ ಸಾಲ ತೀರಿಸಲಾಗದ ರಮೇಶ್ ಲಿತು ಜೇನಾಗೆ ಮಗುವನ್ನು ಮಾರಿದ್ದಾನೆ.

ಈ ಘಟನೆ ನಿಜ ರಮೇಶ್ ಲಿತು ಜೇನಾ ಬಳಿ 3 ಅಥವಾ 4 ಸಾವಿರ ರೂಪಾಯಿಗಳನ್ನು ತೆಗೆದುಕೊಂಡಿದ್ದಾನೆ. ರಮೇಶನ ಹೆಂಡತಿ ಆತನನ್ನು ಬಿಟ್ಟು ಹೋದ ಮೇಲೆ ನನ್ನ ಕೈಯಲ್ಲಿ ಮಗುವನ್ನು ಸಾಕಲು ಆಗುವುದಿಲ್ಲ ಎಂದು ಅವರ ಮಾವನಿಗೆ ಹೇಳಿದ್ದಾನೆ. ಲಿತು ಜೇನಾಗೆ ಕುಟುಂಬವಿದ್ದು ಅವನಿಗೆ ಮಗುವನ್ನು ಕೊಟ್ಟಿದ್ದೇನೆ. ಆದರೆ ಇದು ಶಾಸ್ವತ ಒಪ್ಪಂದವಲ್ಲ ಎಂದು ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿ ಯಶವಂತ್ ಜೇಥ್ವಾ ತಿಳಿಸಿದ್ದಾರೆ.