ಅಸ್ಸಾಂನಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಗೆ ಒಂದು ಬಲಿ

ರಾಜಸ್ಥಾನದಲ್ಲೂ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪತ್ತೆ

 | 
Representative Image

ಕೊರೋನಾದ ಡೆಲ್ಟಾ ರೂಪಾಂತರಿ ವೈರಸ್ ಗೆ ದೇಶದಲ್ಲಿ ಮತ್ತೊಂದು ಸಾವು ಸಂಭವಿಸಿದೆ. ಅಸ್ಸಾಂ ರಾಜ್ಯದಲ್ಲಿ ಡೆಲ್ಟ್ ರೂಪಾಂತರಿತ ವೈರಸ್ ನಿಂದ ಕೊರೋನಾ ರೋಗಿಯೊಬ್ಬರು ಸಾವನ್ನಪ್ಪಿರುವುದಾಗಿ ಅಸ್ಸಾಂನ ಆರೋಗ್ಯ ಸಚಿವ ಕೆಶಬ್ ಮಹಂತಾ ಹೇಳಿದ್ದಾರೆ.

ಕೊರೋನಾ ಎರಡನೇ ಅಲೆ ಹೆಚ್ಚಾದಂತೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿನಲ್ಲಿ 300 ಕೋವಿಡ್ ರೋಗಿಗಳ ಸ್ಯಾಂಪಲ್ ಗಳನ್ನು ಪಶ್ಚಿಮ ಬಂಗಾಳದ ರಾಷ್ಟ್ರೀಯ ಬಯೋಮೆಡಿಕಲ್ ಜಿನೋಮಿಕ್ಸ್ ಸಂಸ್ಥೆಗೆ ಕಳುಹಿಸಲಾಗಿತ್ತು. ಈ ಮೂರು ತಿಂಗಳುಗಳು ಫಲಿತಾಂಶಗಳಲ್ಲಿ ಶೇಖಡ 77% ಡೆಲ್ಟಾ ರೂಪಾಂತರ ವೈರಸ್ ಮತ್ತು ಇನ್ನುಳಿದ ಶೇಖಡ 23% ಫಲಿತಾಂಶ ಕಪ್ಪಾ ರೂಪಾಂತರಿ ಎಂದು ತಿಳಿದುಬಂದಿದೆ ಎಂದು ಅಸ್ಸಾಂ ಆರೋಗ್ಯ ಸಚಿವ ಕೇಶಬ್ ಮಾಹಿತಿ ನೀಡಿದ್ದಾರೆ.

ರಾಜಸ್ಥಾನದಲ್ಲೂ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪತ್ತೆ

ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಈಗ ರಾಜಸ್ಥಾನದಲ್ಲೂ ಕಾಣಿಸಿಕೊಂಡಿದೆ. ರಾಜಸ್ಥಾನದ ಬಿಕೆನರ್ ನಲ್ಲಿ 65 ವರ್ಷದ ಮಹಿಳೆಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ದೃಢಪಟ್ಟಿದ್ದು, ಈಗಾಗಲೆ ಆ ಮಹಿಳೆ ಗುಣಮುಖರಾಗುತ್ತಿದ್ದಾರೆ ಎಂದು ಬಿಕನೇರ್ ನ ಮುಖ್ಯ ವೈದ್ಯಾಧಿಕಾರಿ ಡಾ. ಓ.ಪಿ ಚಹರ್ ತಿಳಿಸಿದ್ದಾರೆ.