ನಿಮ್ಮ ಪಾಪದ ಹಣದಲ್ಲಿ ಲಸಿಕೆ ಹಾಕಿಸಿಕೊಳ್ಳುವ ಅನಿವಾರ್ಯತೆ ರಾಜ್ಯದ ಜನಕ್ಕಿಲ್ಲ: ಬಿಜೆಪಿ
ಸಹಾಯ ಧನ ನೀಡಲು ಘೋಷಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ತಿರುಗೇಟು ನೀಡಿದೆ

ಬೆಂಗಳೂರು: ಕೋವಿಡ್ ಲಸಿಕೆಗೆ ನೂರು ಕೋಟಿ ರೂಪಾಯುಗಳ ಸಹಾಯ ಧನ ನೀಡಲು ಘೋಷಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ತಿರುಗೇಟು ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಉಚಿತ ಲಸಿಕೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೇಳಲಿ, ನಾವು ಸಹಾಯ ಮಾಡುತ್ತೇವೆ ಎಂದಿರುವ ಡಿ.ಕೆ ಶಿವಕುಮಾರ್ ಅವರೆ, ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಲಭವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ ಎಂದು ಟೀಕಿಸಲಾಗಿದೆ.
ಮಾನ್ಯ ಡಿ.ಕೆ ಶಿವಕುಮಾರ್ ಅವರೇ, ಉಚಿತ ಲಸಿಕೆ ನೀಡಲು ನಿಮ್ಮ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಯೋಜನೆ ರೂಪಿಸಿದ್ದೀರಾ? ಜಗತ್ತಿನ ನಾಲ್ಕನೇ ಶ್ರೀಮಂತ ಮಹಿಳೆ ಇದುವರೆಗೆ ಕೋವಿಡ್ ಸಹಾಯ ಹಸ್ತ ಚಾಚಿಲ್ಲವೇಕೆ? ದೆಹಲಿಯಿಂದ ಗೋವಾಕ್ಕೆ ಬಂದದ್ದಾಯಿತು, ಗೋವಾದಿಂದ ಇಟಲಿಗೋ? ಎಂದು ಪ್ರಶ್ನಿಸಲಾಗಿದೆ.
ಸಂಕಷ್ಟದ ಸಮಯದಲ್ಲಿಬಿಟ್ಟಿ ಸಲಹೆ ನೀಡುವುದು, ಜನರ ದಾರಿ ತಪ್ಪಿಸುವುದು. ಇದು ಭಾರತೀಯ ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ಮಾಡುತ್ತಿರುವ ದ್ರೋಹ. ಭ್ರಷ್ಟ ಡಿ.ಕೆ ಶಿವಕುಮಾರ್ ಅವರೇ, ನಿಮಗೆ ನಿಜಕ್ಕೂ ಸಹಾಯ ಮಾಡುವ ಮನಸಿದ್ದರೆ ಒಂದಿಷ್ಟು ಸುಮ್ಮನಿದ್ದು ಬಿಡಿ. ಪೊಳ್ಳು ಆರೋಪ ಮಾಡುವುದು ಬಿಟ್ಟು ಸುಮ್ಮನಿರುವಿರಾ? ಎಂದು ಹೇಳಲಾಗಿದೆ.
ಸರ್ಕಾರಕ್ಕೆ ಸವಾಲೆಸೆಯುವ ಡಿ.ಕೆ ಶಿವಕುಮಾರ್ ಅವರೇ, ರಾಜೀವ್ ಗಾಂಧಿ ಫೌಂಡೇಶನ್ ಖಾತೆಯಲ್ಲಿ ಲಕ್ಷಾಂತರ ಕೋಟಿ ಹಣ ಕೊಳೆಯುತ್ತಿದೆ. ನಿಮ್ಮ ಆದಾಯಕ್ಕೆ ಮೀರಿದ ಆಸ್ತಿಯ ತನಿಖೆ ನಡೆಯುತ್ತಿದೆ. ಇದ್ಯಾವುದೂ ನ್ಯಾಯ ಮಾರ್ಗದ ಗಳಿಕೆಯಲ್ಲ. ಸಹಾಯದ ಹೆಸರಿನಲ್ಲೂ ಕಪ್ಪು ಬಿಳುಪು ದಂಧೆಗೆ ಇಳಿದಿದ್ದೀರಾ? ಉಚಿತ ಲಸಿಕೆಗೆ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿಕೆ ನೀಡಿದಾಗಲೇ, ಅತ್ತೆಯ ದುಡ್ಡನ್ನು ಅಳಿಯನಿಗೆ ದಾನ ಮಾಡುವ ಚಿಲ್ಲರೆ ಯೋಜನೆ ರೂಪಿಸುತ್ತಿರಬಹುದೆಂಬ ಶಂಕೆಯಿತ್ತು. ಈಗ 100 ಕೋಟಿ ನೀಡುವ ಘೋಷಣೆ ಮಾಡಿದ್ದಾರೆ. ಇದು ಜನರ ದಾರಿ ತಪ್ಪಿಸುವ ಭಾರತೀಯ ಕಾಂಗ್ರೆಸ್ ಪಕ್ಷದ ಮತ್ತೊಂದು ಯೋಜನೆ ಅಷ್ಟೇ! ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಉಚಿತ ಲಸಿಕೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೇಳಲಿ, ನಾವು ಸಹಾಯ ಮಾಡುತ್ತೇವೆ ಎಂದಿರುವ @DKShivakumar ಅವರೇ,
— BJP Karnataka (@BJP4Karnataka) May 14, 2021
ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಲಭವಾಗಿ ಸಹಾಯ ಮಾಡಲು ಸಾಧ್ಯವಿಲ್ಲ.
ಅಷ್ಟಕ್ಕೂ ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ.
1/6#ಜನವಿರೋಧಿಕಾಂಗ್ರೆಸ್