AB & B ರಕ್ತ ಗುಂಪಿಗೆ ಸೇರಿದ ಜನ ಇತರೆ ರಕ್ತ ಗುಂಪಿಗೆ ಸೇರಿದವರಿಗಿಂತ ಹೆಚ್ಚು ಕೋವಿಡ್ಗೆ ಒಳಗಾಗುವ ಸಾಧ್ಯತೆ

ಕೌನ್ಸಿಲ್ ಆಫ್ ಸೈಟಿಫಿಕ್ ಅಂಡ್ ಇಂಡಸ್ಟ್ರೀಯಲ್ ರೀಸರ್ಚ್ ನಿಂದ ಸಂಶೋಧನಾ ವರದಿ ಬಿಡುಗಡೆ

 | 
AB & B ರಕ್ತ ಗುಂಪಿಗೆ ಸೇರಿದ ಜನ ಇತರೆ ರಕ್ತ ಗುಂಪಿಗೆ ಸೇರಿದವರಿಗಿಂತ ಹೆಚ್ಚು ಕೋವಿಡ್ಗೆ ಒಳಗಾಗುವ ಸಾಧ್ಯತೆ

ಎಬಿ ಮತ್ತು ಬಿ ರಕ್ತ ಗುಂಪಿಗೆ ಸೇರಿದ ಜನರು ಇತರೆ ರಕ್ತ ಗುಂಪಿಗೆ ಸೇರಿದವರಿಗಿಂತ ಕೋವಿಡ್ 19 ಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಸಿಎಸ್ಐಆರ್ (ಕೌನ್ಸಿಲ್ ಆಫ್ ಸೈಟಿಫಿಕ್ ಅಂಡ್ ಇಂಡಸ್ಟ್ರೀಯಲ್ ರೀಸರ್ಚ್) ಸಂಶೋಧನಾ ಪತ್ರಿಕೆಯಲ್ಲಿ ಬಿಡುಗಡೆ ಮಾಡಿದೆ.

ಓ ರಕ್ತ ಗುಂಪಿನ ಜನರಿಗೆ ಈ ವೈರಸ್ ಅತೀ ಕಡಿಮೆ ಪರಿಣಾಮ ಬಿರಲಿದೆ ಮತ್ತು ಇವರು ರೋಗ ಲಕ್ಷಣರಹಿತರಾಗಿ ಉಳಿಯಲಿದ್ದಾರೆ ಅಥವಾ ಸೌಮ್ಯ ರೋಗ ಗುಣಲಕ್ಷಣವನ್ನು ಹೊಂದಿರುತ್ತಾರೆ ಎಂದು ಸಂಶೋಧನೆಯಲ್ಲಿ ತಿಳಿಸಿದೆ. ಸಸ್ಯಹಾರಿಗಳಿಗಿಂತ ಮಾಂಸಹಾರ ಸೇವಿಸುವವರು ಹೆಚ್ಚು ಕೋವಿಡ್ ಸೋಂಕಿಗೆ ಒಳಗಾಗುತ್ತಾರೆ ಎಂದು ಸಿಎಸ್ಐಆರ್ ರಾಷ್ಟ್ರವ್ಯಾಪಿ ನಡೆಸಿದ ಸಿರೋಪಾಸಿಟಿವಿಟಿ ಸಮೀಕ್ಷೆ ಆಧರಿಸಿ ಸಂಶೋಧನಾ ವರದಿಯಲ್ಲಿ ಸೂಚಿಸಿದೆ.

ಸಸ್ಯಹಾರದಲ್ಲಿರುವ ಹೆಚ್ಚಿನ ನಾರಿನ ಅಂಶ ರೋಗ ನಿರೋಧಕ ಪ್ರತಿಕ್ರಿಯೆಯಲ್ಲಿನ ವ್ಯತ್ಯಾಸಕ್ಕೆ ಕಾರಣವಾಗಿದೆ. ನಾರಿನಾಂಶವುಳ್ಳ ಆಹಾರವು ಉರಿಯೂತ ನಿವಾರಕವಾಗಿದೆ. ಇದು ಸೋಕಿನ ನಂತರ ಎದುರಾಗುವ ಹಲವು ತೊಡಕುಗಳನ್ನು ತಡೆಯುತ್ತದೆ ಮತ್ತು ಸೋಂಕು ಸ್ವತಃ ಪ್ರಕಟವಾಗುವುದನ್ನು ತಡೆಗಟ್ಟುತ್ತದೆ.

ಈ ಮಾಹಿತಿಯನ್ನು 140 ಜನರ ವೈದ್ಯರ ತಂಡವು, ದೇಶದಾದ್ಯಂತ 10 ಸಾವಿರಕ್ಕೂ ಹೆಚ್ಚು ಹೆಚ್ಚು ಜನರಿಂದ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಸೋಂಕಿಗೆ ಒಳಗಾಗುತ್ತಿರುವ ಹೆಚ್ಚಿನವರು ಎಬಿ ರಕ್ತದ ಗುಂಪಿಗೆ ಸೇರಿದವರಾಗಿದ್ದಾರೆ. ನಂತರದ ಸ್ಥಾನವನ್ನು ಬಿ ರಕ್ತದ ಗುಂಪು ಅನುಸರಿಸಿದೆ. ಆದರೆ ಓ ರಕ್ತ ಕಣದ ಗುಂಪಿನ ಜನರು ಅತೀ ಕಡಿಮೆ ಸಿರೋಪಾಸಿಟಿವಿಟಿ ತೋರಿದ್ದಾರೆ ಎಂದು ಈ ಸಮೀಕ್ಷೆಯಿಂದ ಹೊರಬಂದಿದೆ.

ಈ ಬಗ್ಗೆ ಇಂಡಿಯಾ ಟುಡೆ ಜೊತೆ ಮಾತನಾಡಿರುವ ಡಾ.ಶರ್ಮಾ ಅವರು, ಎಬಿ ಮತ್ತು ಬಿ ರಕ್ತ ಗುಂಪಿನ ಜನರಿಗೆ ಹೋಲಿಕೆ ಮಾಡಿದರೆ ಓ ರಕ್ತ ಗುಂಪಿನ ಜನರು ಕೊರೋನಾ ವೈರಸ್ ವಿರುದ್ಧ ಉತ್ತಮ ರೋಗ ನಿರೋಧಕ ಪ್ರತಿಕ್ರಿಯೆಯನ್ನು ಹೊಂದುವ ಸಾಧ್ಯತೆ ಇದೆ. ಹಾಗಂದ ಮಾತ್ರಕ್ಕೆ ಓ ರಕ್ತ ಗುಂಪಿನ ಜನರು ಎಲ್ಲಾ ಕೋವಿಡ್ ತಡೆಗಟ್ಟುವ ಶಿಷ್ಟಾಚಾರವನ್ನು ಬಿಡಬಹುದು ಎಂಬುದು ಇದರ ಅರ್ಥವಲ್ಲ. ಓ ರಕ್ತ ಗುಂಪಿನ ಜನರು ಈ ವೈರಸ್ ಗೆ ಸಂಪೂರ್ಣ ನಿರೋಧಕವಾಗಿರುವುದಿಲ್ಲ ಆದ್ದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ಶರ್ಮಾ ತಿಳಿಸಿರುವ ಅವರು ಈ ಸಂಶೋಧನೆಯು ಮತ್ತಷ್ಟು ವಿವರವಾದ ಅಧ್ಯಯನಕ್ಕೆ ಅರ್ಹವಾಗಿದೆ.