ಲಾಕ್ಡೌನ್ ಲೆಕ್ಕಿಸದೆ ಪರೀಕ್ಷೆ ನಡೆಸುತ್ತಿದ್ದ ಮಧ್ಯಪ್ರದೇಶದ ಖಾಸಗಿ ಶಾಲೆ
ಶಾಲೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಅಧಿಕಾರಿ

ಗುಣ(ಮಧ್ಯಪ್ರದೇಶದ): ಕೊರೋನಾ ಲಾಕ್ಡೌನ್ ನಂತಹ ಕಠಿಣ ನಿಯಮಾವಳಿಗಳಿದ್ದರು ಮಧ್ಯಪ್ರದೇಶದ ಗುಣ ಜಿಲ್ಲೆಯ ಖಾಸಗಿ ಶಾಲೆಯೊಂದು ಆಫ್ ಲೈನ್ ಪರೀಕ್ಷೆ ನಡೆಸುತ್ತಿದ್ದ ಬಗ್ಗೆ ವರದಿಯಾಗದೆ. ಈ ಶಾಲೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವು ಸಾಧ್ಯತೆ ಇದೆ.
ಖಾಸಗಿ ಶಾಲೆಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು, ಈ ಪರೀಕ್ಷೆಗಾಗಿ ಅಂದಾಜು 30-40 ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು. ಶಾಲೆ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆ, ಶಾಲೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೈಬ್ ತಹಶೀಲ್ದಾರ್ ರಮಾಶಂಕರ್ ಸಿಂಗ್ ಹೇಳಿದ್ದಾರೆ.
ಮಧ್ಯಪ್ರದೇಶದ ಸರ್ಕಾರ 1 ರಿಂದ 8ನೇ ತರಗತಿಯ ವರೆಗೆ ಏಪ್ರಿಲ್ 15 ರಿಂದ ಜೂನ್ 13 ರವರೆಗೆ ಬೆಸಿಗೆ ರಜೆ ಘೋಷಿಸಿದ್ದು, 10 ನೇ ತರಗತಿ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಸಾಂಕ್ರಾಮಿಕದ ಹಿನ್ನೆಲೆ ಮುಂದೂಡಲಾಗಿದೆ. ಇದರ ನಡುವೆ ಶಾಲೆಯೊಂದು ಪರೀಕ್ಷೆ ನಡೆಸುತ್ತಿರುವುದು ಮಕ್ಕಳ ರೋಗ್ಯದ ಮೇಲೆ ಈ ಶಾಲೆಗೆ ಎಷ್ಟು ನಿರ್ಲಕ್ಷ್ಯ ಎಂಬುದನ್ನು ತೋರಿಸುತ್ತದೆ.