ಅಪ್ರಾಪ್ತೆಯನ್ನು ಬಲವಂತವಾಗಿ ವೆಶ್ಯಾವಾಟಿಕೆಗೆ ದೂಡಿದ ಪಾಪಿ ತಂದೆ

ಅಪ್ರಾಪ್ತ ಬಾಲಕಿಯ ಮೇಲೆ ನಾಲವರಿಂದ ಸಾಮೂಹಿಕ ಅತ್ಯಾಚಾರ

 | 
Representative Image

ಜೋಧ್ಪುರ್: ಅಪ್ರಾಪ್ತ ಬಾಲಕಿಯನ್ನು ಆಕೆಯ ತಂದೆ ಮತ್ತು ಮಲತಾಯಿ ಇಬ್ಬರೂ ಸೇರಿ ವೇಶ್ಯವಾಟಿಕೆ ಕೂಪಕ್ಕೆ ದೂಡಿದ ಹಿನ್ನೆಲೆ ನಾಲ್ವರು ಪಿಶಾಚಿಗಳು ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಪೈಶಾಚಿಕ ಘಟನೆ ರಾಜಸ್ಥಾನದ ಜೋಧ್ಪುರದಲ್ಲಿ ನಡೆದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಅತ್ಯಾಚಾರಕ್ಕೊಳಗಾದ ಅಪ್ರಾಪ್ರ ಬಾಲಕಿ ತಂದೆ ಕುಡುಕನಾಗಿದ್ದ, ಹಣದ ಆಸೆಗಾಗಿ ತನ್ನ ಮಗಳನ್ನು ಏಳು ತಿಂಗಳುಗಳಿಂದ ಲಂಗ ಮಂಗನಿಯಾರ್ ಎಂದು ಜಾನಪದ ಹಾಡುಗಾರರೊಂದಿಗೆ ಪಾರ್ಟಿಗಳಿಗೆ ಕಳುಹಿಸುತ್ತಿದ್ದ. ಪಾರ್ಟಿಯಲ್ಲಿ ಅಪ್ರಾಪ್ತೆ ಡ್ಯಾನ್ಸ್ ಮಾಡುವಾಗ ಕೆಲವರು ಈ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಓಳಿ ಸಂದರ್ಭದಲ್ಲಿ ನಡೆದ ಪಾರ್ಟಿ ವೇಳೆ ಆಕೆಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆದ ನಂತರ ಅಪ್ರಾಪ್ತ ಬಾಲಕಿ ಪಾರ್ಟಿಗಳಿಗೆ ಹೋಗಲು ನಿರಾಕರಿಸಿದ್ದಾಳೆ ಈ ವೇಳೆ ಆಕೆಯ ತಂದೆ ಆಕೆ ಮೇಲೆ ಹಲ್ಲೆ ನಡೆಸಿ ಯಾರ ಜೊತೆಗೂ ಈ ಘಟನೆ ಬಗ್ಗೆ ಮಾತನಾಡಬಾರದು ಎಂದು ಹೆದರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಅಪ್ರಾಪ್ತ ಬಾಲಕಿಯ ತಾಯಿಯನ್ನು ಹೊರ ಹಾಕಿದ ನಂತರ ಆರೋಪಿ ತಂದೆ ಅಪ್ರಾಪ್ತ ಬಾಲಕಿಯನ್ನು ವೇಶ್ಯವಾಟಿಕೆಗೆ ದೂಡಿದ್ದ, ಇದರಿಂದ ಆತ 5 ಸಾವಿರದಿಂದ 8 ಸಾವಿರ ಹಣ ಪಡೆದಿರುಬಹುದು. ಮತ್ತು ಕಳೆದ ದಾರು ವರ್ಷಗಳಿಂದ ಆಕೆಗೆ ತನ್ನ ಅಮ್ಮ ಮತ್ತು ಅಕ್ಕನನ್ನು ನೋಡಲು ಪಾಪಿ ತಂದೆ ನಿಷೇಧ ಏರಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಸಾಮೂಹಿಕ ಅತ್ಯಾಚಾರದ ತರುವಾಯ ಗರ್ಭಿಣಿಯಾದ ಅಪ್ರಾಪ್ತೆ ತನ್ನ ತಂದೆಗೆ ಹೆದರಿ ಕೆಲದಿನಗಳ ಕಾಲ ಸುಮ್ಮನಿದ್ದು, ನಂತರ ಈ ವಿಷಯವನ್ನು ತನ್ನ ಮಲತಾಯಿಗೆ ತಿಳಿಸಿದ್ದಳೆ. ಈ ವೇಳೆ ಆಕೆಗೆ ವಿಷತೆಗೆದುಕೊಳ್ಳಲು ಹೇಳಿ ಆಕೆಯನ್ನು ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದರೆಂದು ಬಾಲಕಿ ಹೇಳಿದ್ದಾಳೆ. ಮಥಾನಿಯಾ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.