ಬಾಬಾ ರಾಮ್ ದೇವ್ ವಿರುದ್ಧ ದೂರು ದಾಖಲು

ದೂರು ದಾಖಲಿಸಿದ ಛತ್ತೀಸ್ ಗಡ ಭಾರತೀಯ ವೈದ್ಯಕೀಯ ಸಂಘ

 | 
baba ramdev

ರಾಯಪುರ್: ಆಲೋಪಿತಿ ವಿಜ್ಞಾನದ ಬಗ್ಗೆ ತಪ್ಪು ಪ್ರಚಾರ ಮಾಡಿದ ಆರೋಪದ ಮೇಲೆ ಭಾರತೀಯ ವೈದ್ಯಕೀಯ ಸಂಘ ಛತ್ತೀಸ್ ಗಡ ರಾಜ್ಯ ಘಟಕ ನೀಡಿದ ದೂರಿನ ಮೇರೆಗೆ ಬಾಬಾ ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ರಾಯಪುರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್ ಗಡ ಭಾರತೀಯ ವೈದ್ಯಕೀಯ ಸಂಘ ಅಧ್ಯಕ್ಷ ಡಾ. ರಾಕೇಶ್ ಗುಪ್ತ ಭಾರತೀಯ ವೈದ್ಯಕೀಯ ಸಂಘದ ರಾಯಪುರು ಕಾರ್ಯದರ್ಶಿ ವಿಕಾಶ್ ಅಗರ್ವಾಲ್ ಮತ್ತು ಹಲವು ವೈದ್ಯರು ರಾಮ್ ದೇವ್ ವಿರುದ್ಧ ದೂರು ನೀಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ ನೀಡಿದ ಆಧಾರದ ಮೇಲೆ ರಾಮಕೃಷ್ಣ ಯಾದವ್ ಅಲಿಯಾಸ್ ಬಾಬಾ ರಾಮ್ ದೇವ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಯಪುರ ಹಿರಿಯ ಪೊಲೀಸ್ ಮುಖ್ಯಾಧಿಕಾರಿ ಅಜಯ್ ದೇವ್ ಹೇಳಿದ್ದಾರೆ.

ಐಪಿಸಿ ಸೆಕ್ಷನ್ಸ್ 188, ಮತ್ತು 269, 504 ಮತ್ತು 2005ರ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ದೂರು ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಜಯ್ ದೇವ್ ತಿಳಿಸಿದ್ದಾರೆ. ಹಲವು ದಿನಗಳ ಹಿಂದೆ ಬಾಬಾ ರಾಮ್ ದೇವ್ ಅಲೋಪತಿಯ ವಿಜ್ಞಾನವನ್ನು ಅವಹೇಳ ಮಾಡಿ ಭಾರತೀಯ ವೈದ್ಯಕೀಯ ಸಂಘದ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿನ್ನೆಲೆ ದೂರು ನೀಡಿಲಾಗಿದೆ.