ಅವರಪ್ಪನಿಂದ್ಲೂ ಸಹ ಸ್ವಾಮಿ ರಾಮ್ ದೇವ್ ನನ್ನ ಬಂಧಿಸಲು ಸಾಧ್ಯವಿಲ್ಲ!

ಮತ್ತೆ ನಾಲಿಗೆಯನ್ನು ಹರಿಬಿಟ್ಟ ಯೋಗ ಗುರು ಬಾಬಾ ರಾಮ್ ದೇವ್

 | 
baba ramdev

ಕೆಲ ದಿನಗಳ ಹಿಂದೆಯಷ್ಟೇ ಯೋಗ ಗುರು ಬಾಬಾ ರಾಮ್ ದೇವ್ ಆಲೋಪತಿ ಚಿಕಿತ್ಸೆ ಮತ್ತು ವೈದ್ಯರನ್ನು ಅವಹೇಳನ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು ಈಗ ಅವರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಅಧಿಕಾರಿಗಳಿಗೆ ಅರೇಸ್ಟ್ ಮಾಡಲು ಸಾಧ್ಯವೇ ಇಲ್ಲ ಎಂದು ಸವಾಲು ಹಾಕುವ ಮೂಲಕ ಮತ್ತೆ ರಾಮ್ ದೇವ್ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.

“ಖೈರ್, ಅರೆಸ್ಟ್ ತೊ ಉನ್ಕಾ ಬಾಪ್ ಭಿ ನಹಿ ಕರ್ ಸಕ್ತಾ ಸ್ವಾಮಿ ರಾಮ್ ದೇವ್ ಕೋ(ಅವರಪ್ಪನಿಂದಲೂ ಸಹ ಸ್ವಾಮಿ ರಾಮ್ ದೇವ್ ನನ್ನ ಬಂಧಿಸಲು ಸಾಧ್ಯವಿಲ್ಲ) ಅವರು ಸುಖಾ ಸುಮ್ಮನೆ ಕೇಡಿ ರಾಮ್ ದೇವ್, ಮಹಾಕೇಡಿ ರಾಮ್ ದೇವ್, ಅರೆಸ್ಟ್ ರಾಮ್ ದೇವ್ ಎಂದು ಟ್ರೆಂಡ್ ಗಳನ್ನು ಸೃಷ್ಟಿಸಲಾಗುತ್ತಿದೆ. ಅವರು ಅದನ್ನು ಮಾಡಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರುವ ಅರೆಸ್ಟ್ ರಾಮ್ ದೇವ್ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಬಾಬಾ ರಾಮ್ ದೇವ್ ಆಧುನಿಕ ಔಷಧವನ್ನು ಮೂರ್ಖ ವಿಜ್ಞಾನ ಎಂದು ಹೇಳಿಕೆ ನಿಡಿದ್ದ ಹಿನ್ನೆಲೆ ಬಾಬಾ ರಾಮ್ ದೇವ್ ಮತ್ತು ಇಂಡಿಯನ್ ಮೆಡಿಕಲ್ ಅಶೋಷಿಯೇಷನ್ ನಡುವೆ ಮಾತಿನ ಸಮರ ನಡೆದಿತ್ತು. ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದ ಐಎಂಎ ಬುಧವಾರ ಪ್ರಧಾನಿ ಮೋದಿಗೆ ಪತ್ರ ಬರೆದು ರಾಮ್ ದೇವ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿತ್ತು.

ಕೋವಿಡ್-19 ಸಾಂಕ್ರಮಿಕದಿಂದ ಸಾಯುತ್ತಿರುವ ವೇಳೆ ಅಲೋಪತಿ ಔಷಧಿಯನ್ನು ಮೂರ್ಖ ವಿಜ್ಞಾನ ಎಂದಿರುವ ರಾಮ್ ದೇವ್ ಅವರನ್ನು ಅರೆಸ್ಟ್ ಮಾಡುವಂತೆ ಟ್ವಿಟ್ಟರ್ ಮುಖಾಂತರ ಹಲವರು ಆಗ್ರಹಿಸಿದ್ದರು.